ಕಾರವಾರ (KARWAR): ಕಾರವಾರದ ಹಾಲು(MILK) ಖರೀದಿಸುವ ಗ್ರಾಹಕರಿಗೆ ಅಂಗಡಿಯನ್ನಿಟ್ಟು ವ್ಯಾಪಾರ ಮಾಡುವ ವ್ಯಾಪಾರಿಗಳು ಮೋಸ ಮಾಡುತ್ತಿದ್ದಾರೆ. ನಗರದ ಹಳೆ ಉಡುಪಿ ಹೋಟೆಲ್ ಸಮೀಪ ಇರುವ ಕೃಷ್ಣಾ ಶಾಪಿಯಲ್ಲಿ ಅವಧಿ ಮೀರಿದ ಹಾಲು ಮಾರಾಟ ಮಾಡುತ್ತಿದ್ದಾರೆ.

ಇವತ್ತು ಸಂಜೆ ನಗರದ ಗ್ರಾಹಕರೊಬ್ಬರು ತಮ್ಮ ಮನೆಗೆ ಅತಿಥಿಗಳು ಬಂದ ಕಾರಣಕ್ಕೆ ಕೃಷ್ಣಾ ಶಾಫಿಯಲ್ಲಿ ನಂದಿನಿ ಹಾಲು(NANDINI MILK) ಖರೀದಿಸಿದ್ದರು. ಮನೆಗೆ ಹೋಗಿ ಬಿಸಿ ಮಾಡಿದರೆ ಹಾಲು ಹಾಳಾಗಿದೆ. ಈ ಬಗ್ಗೆ ಅಂಗಡಿ ಮಾಲೀಕರ ಗಮನಕ್ಕೆ ತಂದಾಗ ತಮಗೇನು ಸಂಬಂಧವಿಲ್ಲ. ಕಂಪನಿಯವರನ್ನ ಕೇಳಿ ಅಂತಾ ಉಡಾಪೆ ಮಾತನಾಡಿದ್ದಾರೆ.

ಈ ಬಗ್ಗೆ ಇತರ ಗ್ರಾಹಕರು ಆ ಸಂದರ್ಭದಲ್ಲಿ ಖರೀದಿಸಿದ ಹಾಲು ಪರಿಶೀಲಿಸಿದರೆ ಒಂದೊಂದು ಪ್ಯಾಕೇಟಲ್ಲಿ ಒಂದು ಡೇಟ್ ಇರುವುದು ಗೊತ್ತಾಗಿದೆ. ನಂದಿನಿ ಹಾಲು, ದೋಡ್ಲಾ ಹಾಲುಗಳಲ್ಲಿ(DODLA MILK), ಮೊಸರಿನಲ್ಲೂ ಮೋಸ(CHEATING) ಮಾಡುತ್ತಿರುವುದು ಗೊತ್ತಾಗಿದೆ. ಹೀಗಾಗಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳಿಂದ ಕಾರವಾರ ನಗರದಲ್ಲಿ ಈ ರೀತಿ ಅವಧಿ ಮೀರಿದ ಮತ್ತು ಒಂದೆರಡು ದಿನ ಮುಂದಿನ ದಿನಾಂಕ ನಮೂದಿಸಿ ಹಾಲು ಮಾರುತ್ತಿದ್ದಾರೆ. ಆದರೆ ಮನೆಗೆ ತೆಗೆದುಕೊಂಡು ಹೋದರೆ ಹಾಲೆಲ್ಲ ಹಾಳಾಗುತ್ತಿದೆ. ಈ ರೀತಿಯ ಅನುಭವ ಬಹಳಷ್ಟು ಗ್ರಾಹಕರಿಗಾಗಿದೆ.

ಹಾಲು ಮಾರ್ಕೆಟ್ ಗೆ ಪೂರೈಕೆಯಾಗುವ ಸಂದರ್ಭದಲ್ಲಿ ಗ್ರಾಹಕರಿಗೆ ಮಂಗ ಮಾಡಲು ಕಂಪನಿ ಮತ್ತು ವ್ಯಾಪಾರಿಗಳು ಮುಂದಾಗಿದ್ದಾರೆ. ಹಾಲಿನ ಪ್ಯಾಕೇಟ್ ಮಾಡುವ ಮುನ್ನವೇ ಮುಂದಿನ ಎರಡು ದಿನಗಳ ನಂತರದ ಡೇಟ್ ಮುದ್ರಿಸುತ್ತಿದ್ದಾರೆ. ಜನ ದುಡ್ಡು ಕೊಟ್ಟು ಹಾಲು ಖರೀದಿಸಿ ಮನೆಗೆ ಹೋದರೆ ಹಾಲೆಲ್ಲ ಹಾಳಾಗಿ ಶಪಿಸುತ್ತಿದ್ದಾರೆ. ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳು ಹಾಲಿನಲ್ಲಿ ನಡೆಯುವ ಮೋಸ ತಡೆಗಟ್ಟಬೇಕಾಗಿದೆ.

ಇದನ್ನು ಓದಿ : ಅಕ್ರಮ ನಾಟ ಸಾಗಾಟ. ಇಬ್ಬರ ಬಂಧನ

ದಾಂಡೇಲಿಯಲ್ಲಿ ಸರಣಿ ಕಳ್ಳತನ

ಭಟ್ಕಳದಲ್ಲಿ ಪ್ಯಾಲೇಸ್ಟೆನ್ ಧ್ವಜ ತೆರವು.

HSRP ನಂಬರ್ ಪ್ಲೇಟ್. ನವೆಂಬರ್ 20ರವರೆಗೆ ಗಡುವು