ಭಟ್ಕಳ(Murdeshwar) : ಮುರ್ಡೇಶ್ವರ ಸಮೀಪ ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಇಲ್ಲಿನ ಹೈವೇ ಹೋಟೇಲ್(Highway Hotel) ಮುಂದೆ ಇರುವ ರೈಲು ಹಳಿ ಸಮೀಪ ಈ ಅವಘಡ ಸಂಭವಿಸಿದೆ .
ಮೃತ ವ್ಯಕ್ತಿಯನ್ನು ಸಂದೀಪ ಕೆ. ಆರ್ ರಾಮಚಂದ್ರ ಭಂಡಾರಿ (44) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಉಡುಪಿ(Udupi) ಜಿಲ್ಲೆಯ ಹೆರೂರ ಸಹನಾ ಕೆ.ಪಿ.ಟಿ.ಸಿ.ಎಲ್(KPTCL) ಸಬ್ ಸ್ಟೇಷನ್ ಎದುರಿನ ನಿವಾಸಿ ಎಂದು ಹೇಳಲಾಗಿದೆ.
ಯಾವುದೋ ಕಾರಣಕ್ಕೆ ಮುರ್ಡೇಶ್ವರ (MURDESHWAR) ಬೆಂಗಳೂರು-ಮೈಸೂರುನಿಂದ (Banglore-Mysore)ಮುರ್ಡೇಶ್ವರಕ್ಕೆ ಬರುತ್ತಿದ್ದ ರೈಲಿಗೆ(Railway) ಅಡ್ಡ ಬಂದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ (Murdeshwar Police Station) ರೈಲ್ವೆ ಸ್ಟೇಷನ್ ಮಾಸ್ಟರ್ ಉಮೇಶ ನಾಯ್ಕ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಗೋಕರ್ಣದಲ್ಲಿ ಸಿಡಿಲು ಬಡಿದು ಗಾಯ.