ಕಾರವಾರ (Karwar) : ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಆಕಸ್ಮಿಕ ಬೆಂಕಿ(Fire) ಹೊತ್ತಿಕೊಂಡು ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ.
ಕಾರವಾರ ತಾಲೂಕಿನ ವಿರ್ಜೆ ಗ್ರಾಮದ(Virje Village) ಬಳಿ ಈ ಘಟನೆ ಸಂಭವಿಸಿದೆ. ಕೈಗಾ ಟೌನ್‌ಶಿಪ್ (Kaiga Township) ಉದ್ಯೋಗಿಗಳು ಪಾರಾಗಿದ್ದು ಬೆಂಕಿಯಿಂದಾಗಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಕೈಗಾದಿಂದ ಉದ್ಯೋಗಿಗಳನ್ನ ಹತ್ತಿಸಿಕೊಂಡು ಬಸ್ ಚಲಿಸುತ್ತಿತ್ತು. ವಿರ್ಜೆ ಬಳಿ ಬರುತ್ತಿದ್ದ ವೇಳೆ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಯಿತು . ಘಟನೆಯಿಂದ ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಮಲ್ಲಾಪುರ ಪೊಲೀಸ್ ಠಾಣಾ(Mallapur Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಸಮಾಧಿಯಿಂದ ಎದ್ದು ಬಂದ ಯೋಗ ಶಿಕ್ಷಕಿ
ಕಾರವಾರದಲ್ಲಿ ಕಾರಿಗೆ ಆಕಸ್ಮಿಕ ಬೆಂಕಿ