ಕಾರವಾರ(Karwar) : ನಗರದ ಬೈತಕೋಲ್ ನಲ್ಲಿ ಕಳೆದ ಕೆಲ ದಿನಗಳಿಂದ ನಗರಸಭೆ ಸ್ವಚ್ಛಗೊಳಿಸಿಲ್ಲ. ಇವತ್ತು ಇಲ್ಲಿನ ಭೂದೇವಿ ಜಾತ್ರೆ ಇದ್ದರೂ ಕಾರವಾರ ನಗರಸಭೆ ನಿರ್ಲಕ್ಷ್ಯ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರಸಭೆ ವಾರ್ಡ್ ನಂಬರ್ ಒಂದರ ಸದಸ್ಯರು ನಗರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ತಿಳಿಸಿದರೂ  ನಿರ್ಲಕ್ಷ್ಯ  ವಹಿಸಲಾಗಿದೆ.

ಬೈತಖೋಲ ಭೂದೇವಿ ಜಾತ್ರೆ ಇರುವ ಕಾರಣಕ್ಕೆ   15 ದಿನದ  ಮುಂಚಿತವಾಗಿ  ನಗರಸಭೆಗೆ  ಸ್ವಚ್ಛಗೊಳಿಸಲು  ಮನವಿ ಮಾಡಲಾಗಿತ್ತು. ಇದುವರೆಗೆ ಇಲ್ಲಿನ ತುಂಬಿರುವ  ಕಸ ವಿಲೇವಾರಿ  ಮಾಡಿಲ್ಲ. ಜಾತ್ರೆಯಂತ ಬೈತಕೋಲ್ ನಿವಾಸಿಗಳು ಮನೆಗಳನ್ನ ಸ್ವಚ್ಛಗೊಳಿಸಿದ್ದಾರೆ. ಆದರೆ ನಗರಸಭೆ ತನ್ನ ವಾರ್ಡ್ ಗಳನ್ನ ಕ್ಲೀನ್ ಮಾಡದೆ ರಾಶಿರಾಶಿ ಕಸಗಳನ್ನ ತುಂಬಿಸಿಕೊಂಡಿರುವುದು ಜಾತ್ರೆಗೆ ಬಂದವರು ಹೇಸಿಗೆ ಪಡುವಂತಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಹಿಂದೂಗಳ ವಿರಾಟ್ ದರ್ಶನ.

ಕುಡ್ಲೆ ಬೀಚಿನಲ್ಲಿ ಇನ್ನಿಬ್ಬರು ಪ್ರವಾಸಿಗರ ರಕ್ಷಣೆ.

ಗೋವಾದಲ್ಲಿ ಇನ್ಮುಂದೆ ಬಾಡಿಗೆ ಮನೆ ಪಡೆಯೋದು ಸುಲಭವಿಲ್ಲ.