ಅಂಕೋಲಾ : ಗೋಕರ್ಣದ ಗಂಗೆಕೊಳ್ಳ ಬಳಿ ಮಹಿಳೆಯೋರ್ವಳ ಶವ ಪತ್ತೆಯಾಗಿದೆ. ತಾಲೂಕಿನ ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾದ ಮಹಿಳೆ ಇವರಿರುವ ಸಾಧ್ಯತೆ ಹೆಚ್ಚಾಗಿದೆ.

ಮಂಗಳವಾರ ಬೆಳಿಗ್ಗೆ ಗಂಗೆಕೊಳ್ಳ ತೀರದಲ್ಲಿ  ಪತ್ತೆಯಾಗಿದೆ. ಉಳುವರೆ ಗ್ರಾಮದ ಸಣ್ಣಿ ಹನ್ಮಂತ ಗೌಡ (55) ಮೃತದೇಹ ಇರಬಹುದು ಎಂದು ತಿಳಿಸಲಾಗಿದೆ  ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ.

ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಕೆಲ ಮನೆಗಳು ಕುಸಿತವಾಗಿತ್ತು. ಮನೆಯಲ್ಲಿದ್ದ ಸಣ್ಣಿ ಗೌಡ ನಾಪತ್ತೆಯಾಗಿದ್ದಳು. ಘಟನೆಯಲ್ಲಿ ನಾಪತ್ತೆಯಾದವರಲ್ಲಿ ಇವರೊಬ್ಬರೇ ಆಗಿರುವುದರಿಂದ ಸಣ್ಣಿ ಯೇ ಆಗಿರಬಹುದು.