ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ(Marikamba Government Highschool) ವಿದ್ಯಾರ್ಥಿನಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಬರುವ ಜೊತೆಗೆ ಶಿರಸಿ(Sirsi) ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಲತಿಕಾ ನಾಗೇಶ ಮೊಗೇರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ(SSLC Exam) ಇಡೀ ರಾಜ್ಯವೇ ಗಮನ ಸೆಳೆಯುವ ಸಾಧನೆ ಮಾಡಿದ್ದಾಳೆ. ಕನ್ನಡಕ್ಕೆ 125, ಇಂಗ್ಲೀಷ್, ಸಂಸ್ಕೃತ, ಗಣಿತ, ಸಮಾಜ ವಿಜ್ಞಾನದಲ್ಲಿ 100ರಷ್ಟು ಅಂಕ ಪಡೆದ ಈಕೆ ವಿಜ್ಞಾನದಲ್ಲಿ 98 ಅಂಕ ಪಡೆದಿದ್ದಾಳೆ.
ಲತಿಕಾಳ ತಂದೆ ಶಿರಸಿಯ ಸಿಪಿ ಬಜಾರ್(Sirsi CP Bazar) ರಸ್ತೆ ಬದಿಯಲ್ಲಿ ಶ್ರೀದೇವಿ ಕ್ಯಾಂಟೀನ್(Shridevi Canteen) ಹೆಸರಿನ ಚಿಕ್ಕ ಅಂಗಡಿ ಇಟ್ಟು ಟೀ, ಬಜೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರ ಮಗಳ ಸತತ ಪರಿಶ್ರಮದಿಂದ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ(SSLC Exam) ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಚಿತ್ರಕಲೆಯಲ್ಲೂ(Drawing) ಆಸಕ್ತಿ ಹೊಂದಿರುವ ಲತಿಕಾಳ ಬಿಡಿಸಿರುವ ಚಿತ್ರವೇ ಅಪ್ಪನ ಕ್ಯಾಂಟೀನ್ ನಲ್ಲಿ ಗ್ರಾಹಕರನ್ನ ಸೆಳೆಯುತ್ತಿದೆ. ಮೂಲತಃ ಹೊನ್ನಾವರ(Honnavar) ತಾಲೂಕಿನ ಕೊಪ್ಪದ ನಾಗೇಶ ಮೊಗೇರ ಅವರು ಕಳೆದ 20ವರ್ಷಗಳಿಂದ ಶಿರಸಿಯಲ್ಲಿ ಟೀ ಅಂಗಡಿಯ(Sirsi Teashop) ಮೂಲಕ ತಮ್ಮ ಸಂಸಾರ ನಿಭಾಯಿಸುತ್ತಿದ್ದಾರೆ. ತಾಯಿ ಲೀಲಾವತಿ ಪತಿಗೆ ಸಹಾಯ ಮಾಡುತ್ತಿದ್ದಾರೆ.
ಮಗಳ ಸಾಧನೆಗೆ ತಂದೆ ನಾಗೇಶ ಮೊಗೇರ, ತಾಯಿ ಲೀಲಾವತಿ ಖುಷಿ ವ್ಯಕ್ತಪಡಿಸಿದ್ದು , ಮನೆಗೆಲಸ ಮಾಡುವ ಜೊತೆಗೆ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಓದುತ್ತಿದ್ದಳು. ರಾತ್ರಿ 11ಗಂಟೆವರೆಗೆ ಓದುತ್ತಿದ್ದಳು. ಮಗಳ ಮೇಲೆ ನಂಬಿಕೆ ಇತ್ತು. ಮುಂದೆ ಕೂಡ ಸಾಧನೆ ಮಾಡುತ್ತಾಳೆಂಬ ನಂಬಿಕೆ ಇದೆ ಅಂತಾರೆ ಪಾಲಕರು.
ಲತಿಕಾಳ ಸಾಧನೆಗೆ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಆಡಳಿತ ಮಂಡಳಿ, ಗಣ್ಯರು, ಜಿಲ್ಲೆಯ ಮೊಗೇರ ಸಮಾಜ(Moger Community) ಬಾಂಧವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನು ಓದಿ : ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯನ್ನ ಗೈರು ಮಾಡಿ ಫೇಲ್ ಮಾಡಿದ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ. ಏಳು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್.
