ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕೋಲಾರ(Kolara) : ಎಸ್ಎಸ್ಸೆಲ್ಸಿ ಪರೀಕ್ಷೆಯಲ್ಲಿ(SSLC Exam Pass) ಉತ್ತೀರ್ಣನಾದ ಸಂತಸದಲ್ಲಿ ಸ್ನೇಹಿತರ ಜೊತೆ ಈಜಲು ತೆರಳಿದ ಬಾಲಕನೋರ್ವ ಮೃತಪಟ್ಟ  ಧಾರುಣ ಘಟನೆ ಗುರುವಾರ ನಡೆದಿದೆ.

ಮುಳಬಾಗಿಲು(Mulabagilu) ತಾಲೂಕಿನ ಸೊಣ್ಣವಾಡಿ ಗ್ರಾಮದ(Sonnawadi Village ) ಕಿರಣ್ (15) ಮೃತ ಬಾಲಕ. ಎಸ್ಎಸ್ಎಲ್ಸಿಯಲ್ಲಿ 239 ಅಂಕಗಳಿಸಿದ್ದ.  ಫಲಿತಾಂಶ ಪ್ರಕಟಗೊಂಡ ಬಳಿಕ ಸ್ನೇಹಿತರೊಂದಿಗೆ ತೆರಳಿದ್ದ ಕಿರಣ್ ಬಾವಿಯಲ್ಲಿ ನಾಪತ್ತೆಯಾಗಿದ್ದ. 

ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಒಂದು‌ ತಾಸುಗಳ ಕಾಲ  ಶೋಧ ಕಾರ್ಯ ನಡೆಸಿದ ನಂತರ ಬಾಲಕನ ಶವ ಪತ್ತೆಯಾಗಿದೆ.‌ ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣಾ(Mulabagilu Rural Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ರಾಜ್ಯಕ್ಕೆ ಮೂರನೇ, ಶಿರಸಿ ಶೈಕ್ಷಣಿಕ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಲತಿಕಾ ಮೊಗೇರ. ಬಡ ಟೀ ಅಂಗಡಿಯವನ ಮಗಳ ಯಶೋಗಾಥೆ.

ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯನ್ನ ಗೈರು ಮಾಡಿ  ಫೇಲ್ ಮಾಡಿದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ. ಏಳು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್.