ಭಟ್ಕಳ(BHATKAL): ತಾಲೂಕಿನ ಬೆಳಕೆ ರಿಕ್ರಿಯೇಶನ್ ಕ್ಲಬ್ ಮೇಲೆ ದಾಳಿ (RAID) ನಡೆಸಿದ ಪೊಲೀಸರು ಎಂಟು ಜನರನ್ನ ವಶಕ್ಕೆ ಪಡೆದಿದ್ದಾರೆ.

ಭಟ್ಕಳ ಪೊಲೀಸ್ ಇನ್ಸ್‌ಪೆಕ್ಟರ್‌ ಚಂದನ ಗೋಪಾಲ ವಿ. ನೇತೃತ್ವದಲ್ಲಿ ಗ್ರಾಮೀಣ ಠಾಣೆ ಪೊಲೀಸರ ಕೈಗೆ ದಾಳಿ ನಡೆಸಿದ್ದರು.

ಬೆಳಕೆ(BELKE ) ಕಲ್ದಂಡೆಯ ಹನುಮಂತ ಗೊಯ್ದ ನಾಯ್ಕ, ಕೇಶವ ರಾಮ ನಾಯ್ಕ ಮತ್ತು ಶ್ರೀಧರ ಮಂಜಪ್ಪ ನಾಯ್ಕ ಹಡೀಲ,  ಅಂಗಡಿಮನೆಯ ವೆಂಕಟೇಶ ನಾರಾಯಣ ನಾಯ್ಕ, ಗೊರಟೆ ಕರಿಯಾಸರಮನೆಯ ಪಾಂಡು ಮಳ್ಳ ನಾಯ್ಕ, ಕುಕನೀರ ನಿವಾಸಿ ಗಣಪತಿ ಈರಪ್ಪ ನಾಯ್ಕ, ರಂಗಿಕಟ್ಟೆಯ ಸಂತೋಷ ಗೋವಿಂದ ದೇವಡಿಗ ಹಾಗೂ ಆಸರಕೇರಿಯ ನಾರಾಯಣ ಕುಪ್ಪಯ್ಯ ನಾಯ್ಕ ಬಂಧಿತರು.

ಬೆಳಕೆಯ ಕಲ್ದಂಡೆಯ ಭೂಮಿಕಾ ಫ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ (BHOOMIKA FRIENDS RECREATION CLUB) ಮೇಲೆ  ದಾಳಿ ನಡೆಸಲಾಗಿತ್ತು. ದಾಳಿಯ ವೇಳೆ ಇಸ್ಪೀಟ್ ಜೂಜಾಟ ಆಡುತ್ತಿದ್ದರು. ಕ್ಲಬ್‌ನ ಒಳಗಡೆ ಕೌಂಟರ್‌ನಲ್ಲಿ ಹಣ ಕೊಟ್ಟು, ಹಣದ ಬದಲು ಟೋಕನ್‌ಗಳನ್ನು ಪಡೆದು ಇಸ್ಪೀಟ್ ಆಡುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ದಾಳಿ ವೇಳೆ ಸುಮಾರು 2816 ರೂ. ನಗದು ಮತ್ತು ಒಂದು ಡಿವಿಆ‌ರ್ ವಶಕ್ಕೆ ಪಡೆಯಲಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ (BHATKAL RURAL STATION) ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ  ಕೈಗೊಂಡಿದ್ದಾರೆ.

ಇದನ್ನು ಓದಿ : ಸೇತುವೆಯಿಂದ ಜಿಗಿದ ಮಹಿಳೆ

ಸುಳ್ಳು ಸುದ್ದಿ ಹರಡುವವರ ಮೇಲೆ ಕ್ರಮ