ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಕಾರವಾರ ನಗರ ಠಾಣೆ ಪೊಲೀಸರು(Karwar Town Station Police) ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ(Udupi District Manipal) ಬಂಧಿಸಿದ್ದಾರೆ.
ಕೊಲೆ ಹಾಗೂ ಸರಣಿ ಮನೆಕಳ್ಳತನ(Serial House Theft) ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಂಕೋಲಾ ತಾಲೂಕಿನ(Ankola Taluku) ಬೆಳಂಬಾರ ಗ್ರಾಮದ ನಿವಾಸಿ, ಹಾಲಿ ಹಾರವಾಡದ ವಿವೇಕ ಅಲಿಯಾಸ್ ವಿವೇಕಾನಂದ ದುರ್ಗಯ್ಯಾ ಖಾರ್ವಿ ಬಂಧಿತನಾಗಿದ್ದಾನೆ.
2018ರಲ್ಲಿ ಈತನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ಕೊಲೆ ಪ್ರಕರಣ ದಾಖಲಾಗಿತ್ತು. ಅಲ್ಲದೇ ಕಾರವಾರ ನಗರ(Karwar Town), ಅಂಕೋಲಾ(Ankola), ಕುಮಟಾ(Kumta) ಹಾಗೂ ಗೋಕರ್ಣ ಪೊಲೀಸ್ ಠಾಣೆಗಳಲ್ಲಿ(Gokarn Police Station) ಒಟ್ಟು ಒಂಬತ್ತು ಮನೆಕಳ್ಳತನ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ಸುಮಾರು ಒಂದು ವರ್ಷದಿಂದ ಆತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿ ಬಂಧನಕ್ಕೋಸ್ಕರ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಕಾರವಾರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ ವಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಕಾರವಾರ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ ನೇತೃತ್ವದಲ್ಲಿ, ಪೊಲೀಸ್ ಉಪನಿರೀಕ್ಷಕ ಉದ್ದಪ್ಪ ಎ. ಧರೆಪ್ಪನವರ, ಸಿಪಿಸಿ ಗುರು ನಾಯಕ್ ಹಾಗೂ ಸಿಪಿಸಿ ರಾಜೇಶ್ ನಾಯಕ್ ಅವರ ತಂಡ ಮೊಬೈಲ್ ಕರೆ ವಿವರಗಳು (ಸಿಡಿಆರ್) ಮತ್ತು ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಆರೋಪಿಯ ಸುಳಿವು ಪತ್ತೆಹಚ್ಚಿತು. ಬಳಿಕ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ(Manipal) ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನು ಓದಿ : ಬೈಕ್ ಆಟೋ ಮುಖಾಮುಖಿ ಢಿಕ್ಕಿ. ಅಪಘಾತದಲ್ಲಿ ಮಹಿಳೆ ದುರ್ಮರಣ.
