ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ (panaji) : ಗೋವಾದ(Goa) ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ (Verna Industrial Area) ಬಾರೀ ಅಗ್ನಿ ದುರಂತ ಸಂಭವಿಸಿದೆ.
ದುರಂತದಲ್ಲಿ ರೆನಾಲ್ಟ್ ಕಂಪೆನಿಯ(Renault Company) ಸುಮಾರು 33ಕ್ಕೂ ಹೆಚ್ಚು ಕಾರುಗಳು ಅಗ್ನಿಗಾಹುತಿಯಾಗಿವೆ. ಮಡಗಾಂ-ಪಣಜಿ ಹೆದ್ದಾರಿಯ(Madagaum-Panaji H8ghway) ಪಕ್ಕದಲ್ಲಿಯೇ ರೆನಾಲ್ಟ್ ಕಂಪೆನಿಯ(Renault Company) ಶೋರೂಮ್ ಇದೆ. ಕಂಪೆನಿಯ ಮುಂಭಾಗದ ಪ್ರದೇಶದಲ್ಲಿ ಬಯಲಿನಲ್ಲಿ ಮಾರಾಟಕ್ಕೆ ತರಲಾದ ಕಾರುಗಳನ್ನು ನಿಲ್ಲಿಸಲಾಗುತ್ತದೆ. ಮಂಗಳವಾರ ಮಧ್ಯಾಹ್ನ ಸುಮಾರಿಗೆ ಒಣ ಹುಲ್ಲಿಗೆ ಬೆಂಕಿ(Gross Fire) ಹೊತ್ತಿಕೊಂಡು ನೋಡು ನೋಡುತ್ತಿರುವಂತೆಯೇ, ಬೆಂಕಿ ಆವರಿಸಿ ಕಾರುಗಳು ನಿಲ್ಲಿಸಿದ ಜಾಗಕ್ಕೆ ತಲುಪಿದೆ. ಆಗ ಕಂಪೆನಿಯ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಿಲ್ಲ. ಕಾಣ ಕಾಣುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ 33ಕ್ಕೂ ಹೆಚ್ಚು ಕಾರುಗಳು ಸುಟ್ಟು(Cars Burn) ಕರಕಲಾಗಿವೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ(Fire Brigade) ಸಿಬ್ಬಂದಿಗಳು ಎರಡು ತಾಸುಗಳ ಕಾಲ ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.,
ವೆರ್ಣಾ ಕೈಗಾರಿಕಾ ಪ್ರದೇಶವು ಗೋವಾ ರಾಜ್ಯದ (Goa State) ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ಸಿಪ್ಲಾ(Cipla), ಫಿನೊಲೆಕ್ಸ್(Pinolex), ಡಿ-ಲಿಂಕ್ನಂತಹ(D Link) ನೂರಾರು ಕಂಪೆನಿಗಳು ಇವೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರುವ ಮೂಲಕ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಇದನ್ನು ಓದಿ : ಹಸುವಿನ ಹತ್ಯೆ ಪ್ರಕರಣ. ಐವರು ವಶಕ್ಕೆ. ಕೃತ್ಯದಲ್ಲಿ ತೊಡಗಿದವರ ಗಡಿಪಾರಿಗೆ ಕ್ರಮ
ಗೋ ಹಂತಕರ ಮೇಲೆ ಪೊಲೀಸರು ಗುಂಡಿನ ಮೊರೆತ ಮೊಳಗಿಸಲಿ : ನಾಗರಾಜ ನಾಯಕ್ ಗುಡುಗು.
ಮಾಡೆಲ್ ಕಮ್ ಕಂಟೆಂಟ್ ಕ್ರಿಯೇಟರ್ ಆಗಿ ಬದಲಾದ ಮೊನಾಲಿಸಾ.
ರಾಜ್ಯದಲ್ಲಿ ಮದ್ಯ ಮತ್ತೆ ದುಬಾರಿ. ಮದ್ಯ ಪ್ರಿಯರಿಗೆ ಶಾಕ್
ಅಂದು ಕರ್ನಾಟಕದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಸೇವೆ. ಇಂದು ನಾಗಾ ಸಾಧು !
ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ.