ಭಟ್ಕಳ(BHATKAL) : ರಾಷ್ಟ್ರೀಯ ಸ್ವಯಂ ಸೇವಕ(RSS) ಸಂಘದ  ಶತಾಬ್ಧಿ ಹೊಸ್ತಿಲಿನಲ್ಲಿ  ಇತಿಹಾಸದಲ್ಲೆ  ಮೊದಲ ಬಾರಿಗೆ ಭಟ್ಕಳದಲ್ಲಿ ಭವ್ಯ ಪಥ ಸಂಚಲನ ನಡೆಯಲಿದೆ.

ಅಕ್ಟೋಬರ್ 27 ರಂದು ರವಿವಾರ ಮಧ್ಯಾಹ್ನ 3-15 ಗಂಟೆಗೆ ಆರ್ ಎಸ್ ಎಸ್ ಕಾರ್ಯಕರ್ತರು ಭಟ್ಕಳ ಪಟ್ಟಣದಲ್ಲಿ(Bhatkal Pattana) ಎರಡು ದಿಕ್ಕಿನೆಡೆಗೆ ಸಾಗಲಿದ್ದಾರೆ. ಮಹಾನಗರಗಳಲ್ಲಿ ನಡೆಯುವ ಹಾಗೆ ಮೊದಲ ಬಾರಿಗೆ ಭಟ್ಕಳದಲ್ಲಿ ಆರ್ ಎಸ್ ಎಸ್ ಸ್ವಯಂ ಸೇವಕರು ಈ ಕಾರ್ಯಕ್ರಮ ನಡೆಸಲಿದ್ದಾರೆ.

ಅಂದು ನ್ಯೂ ಇಂಗ್ಲೀಷ್  ಶಾಲೆಯ(New English School) ಎದುರು ಸೇರುವ ಆರ್ ಎಸ್ ಎಸ್ ಕಾರ್ಯಕರ್ತರು ಒಂದು ಪಥವಾಗಿ ಸೋನಾರಕೇರಿ(Sonarakeri), ಆಸರಕೇರಿ(Asarakeri), ಮುಖ್ಯ ರಸ್ತೆ (Main Road) ಮಾರ್ಗವಾಗಿ ಸಾಗಿ ಬಳಿಕ ಭಟ್ಕಳ ಸರ್ಕಲ್ ಗೆ(Bhatkal Circle) ಬರಲಿದ್ದಾರೆ. ಇನ್ನೊಂದು ಪಥ ಬಂದರ್ ರಸ್ತೆ, ಸಾಗರ್ ರಸ್ತೆ(Sagar Road), ಹುರುಳಿಸಾಲ್(Hurulisal) ಮಾರ್ಗದಲ್ಲಿ ಸಾಗಿ ಬಳಿಕ ಸರ್ಕಲ್ ಗೆ ಬರಲಿದ್ದು ಅಲ್ಲಿಯೇ ಎರಡು ಪಥಗಳ ಅದ್ಬುತ ಸಂಗಮವಾಗಲಿದೆ. ನಂತರ ಎರಡು ಪಥಗಳು ಒಟ್ಟಾಗಿ ನ್ಯೂ ಇಂಗ್ಲಿಷ್ ಶಾಲೆಯತ್ತ ತೆರಳಲಿದ್ದು ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಈ ಅದ್ಬುತ ಕ್ಷಣಗಳಿಗಾಗಿ ಭಟ್ಕಳದ ಆರ್ ಎಸ್ ಎಸ್(RSS) ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಎಂಟು ನೂರರಿಂದ ಸಾವಿರ ಗಣ ವೇಷಧಾರಿಗಳು ಭಾಗವಹಿಸಲಿದ್ದು, ಇದರ ಜೊತೆಗೆ ಭಟ್ಕಳದ ಹಿಂದೂ ಸಮಾಜದ(Hindu Samaj) ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮುಖಂಡರು ತಿಳಿಸಿದ್ದಾರೆ.

ಇದನ್ನು ಓದಿ : ಹಿರಿಯ ವ್ಯಕ್ತಿಗೆ ಹೂ ಸಿಹಿ ನೀಡಿ ಗೌರವಿಸಿದ ಎಸ್ಪಿ

ಶಾಂತಿ, ಸಾಮರಸ್ಯ ಹಾಳು ಮಾಡುವ ಗೋವು ಕಳ್ಳರನ್ನ ಬಂಧಿಸಿ. ತಂಜಿಮ್ ಆಗ್ರಹ

ಮನೆ ಗೋಡೆ ಒಡೆದು ಅಡಿಕೆ ಕದ್ದ. ಪೊಲೀಸರಿಗೆ ಸಿಕ್ಕಿ ಬಿದ್ದ