ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ (Newdelhi): ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರದ(Central) ಎನ್‌ಡಿಎ(NDA) ಸರ್ಕಾರದ 2025ನೇ ಸಾಲಿನ ಬಜೆಟ್(Budjet) ಮಂಡನೆ ಮಾಡಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Seetaraman) ಅವರು ಶನಿವಾರ  ಬಜೆಟ್ ಮಂಡನೆ ಮಾಡಿದರು. ಬಜೆಟ್‌ ಮಂಡನೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಈ ಬಜೆಟ್ ಸಾಮಾನ್ಯ ಜನರಿಗಾಗಿ ತಯಾರಿಸಲಾಗಿದೆ’ ಎಂದು ಹೇಳಿಕೆ ನೀಡಿದ್ದರು.

ಎನ್‌ಡಿಎ ಸರ್ಕಾರದ (NDA Government) ಅವಧಿಯಲ್ಲಿ, ನಿರ್ಮಲಾ ಸೀತಾರಾಮನ್ ಇದುವರೆಗೆ ಒಟ್ಟು ಆರು ಪೂರ್ಣ ಪ್ರಮಾಣದ ಮತ್ತು ಎರಡು ಮಧ್ಯಂತರ ಬಜೆಟ್‌ಗಳನ್ನು ಮಂಡಿಸಿದ್ದಾರೆ.  2025 ರ ಕೇಂದ್ರ ಬಜೆಟ್(Central Budjet) ಹಣಕಾಸು ಸಚಿವೆ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಎಂಟನೇ ಬಜೆಟ್ ಭಾಷಣವಾಗಿದೆ.

ಕೇಂದ್ರದ ಈ ಬಜೆಟ್‌ನಲ್ಲಿ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ. ಮೊದಲ ಬಾರಿ ಉದ್ಯಮ ಆರಂಭಿಸುವ ಎಸ್‌ಸಿ, ಎಸ್‌ಟಿ ಸಮುದಾಯದವರು(Sc St Community) ಹಾಗೂ ಮಹಿಳೆಯರಿಗೆ 2 ಕೋಟಿ ರೂಪಾಯಿವರೆಗೂ ಸಾಲ ನೀಡುವುದಾಗಿ ಘೋಷಣೆಯಾಗಿದೆ. ಇದರಿಂದ 22 ಲಕ್ಷ ಮಹಿಳಾ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಭಾವಿಸಲಾಗಿದೆ.

ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ವಿನಾಯಿತಿ ಜೊತೆಗೆ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. 2025-26ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದ ಅವರು, 12 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯವನ್ನು ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದರಿಂದ ರೂ. 80 ಸಾವಿರ ಉಳಿತಾಯವಾಗಲಿದೆ. ವಾರ್ಷಿಕ 18 ಲಕ್ಷ ಆದಾಯದಲ್ಲಿ 70 ಸಾವಿರ ಉಳಿತಾಯವಾಗಲಿದೆ. 

ಈ ಬಾರಿಯ ಒಟ್ಟು ಬಜೆಟ್‌ನಲ್ಲಿ ಸೇನಾ ಬಲವನ್ನು ಹೆಚ್ಚಿಸಲು ಹೊಸ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಖರೀದಿಗೆ  1.8 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಆದಾಯ ವೆಚ್ಚಕ್ಕಾಗಿ 3.11 ಲಕ್ಷ ಕೋಟಿ ರೂ, ಪಿಂಚಣಿಗಾಗಿ 1.6 ಲಕ್ಷ ಕೋಟಿ ರೂ, ರಕ್ಷಣಾ ಸಚಿವಾಲಯ (ನಾಗರಿಕ) 28,682 ಕೋಟಿ ರೂ. ನೀಡಲಾಗಿದೆ.

12 ಲಕ್ಷದವರೆಗಿನ ಆದಾಯದ ಮೇಲೆ ಈಗ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಹಾಗಾದರೆ ಕಳೆದ ಕೆಲವು ವರ್ಷಗಳಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯು ಹೇಗೆ ಬದಲಾಗಿದೆ ಎಂಬುದನ್ನು ಇಲ್ಲಿ ಗಮನಿಸಿ. 2005ರಲ್ಲಿ ರೂ 1 ಲಕ್ಷ, 2012: ರೂ 2 ಲಕ್ಷ, 2014: ರೂ 2.5 ಲಕ್ಷ, 2019: ರೂ 5 ಲಕ್ಷ, 2023: ರೂ 7 ಲಕ್ಷ, 2025: ರೂ 12 ಲಕ್ಷ.

ಇಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ತೆರಿಗೆದಾರರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಇನ್ನು ಮುಂದೆ 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಜೊತೆಗೆ, ಆದಾಯ ತೆರಿಗೆ ರಿಟರ್ನ್(incometax return) ಸಲ್ಲಿಸುವ ಸಮಯದ ಮಿತಿಯನ್ನು 2 ವರ್ಷದಿಂದ 4 ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಜೆಟ್ ಜನ ಸಾಮಾನ್ಯರಿಗೆ ತುಸು ಸಮಾಧಾನ ನೀಡಿದೆ. ಇನ್ಮುಂದೆ ಮೊಬೈಲ್(Mobile), ಟಿವಿ(TV), ಎಲೆಕ್ಟ್ರಿಕ್ ಕಾರುಗಳಂತಹ(Electric Car) ಸರಕುಗಳು ಅಗ್ಗವಾಗಲಿವೆ. ಹೌದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 82 ಸರಕುಗಳ ಮೇಲಿನ ಸೆಸ್ ಅನ್ನು ತೆಗೆದು ಹಾಕಲಾಗಿದೆ ಎಂದಿದ್ದಾರೆ.
36 ಕ್ಯಾನ್ಸರ್ ಔಷಧಿಗಳು (Cancer Medicine) ಅಗ್ಗವಾಗಲಿವೆ.  ಬಟ್ಟೆಗಳು ಅಗ್ಗವಾಗುತ್ತವೆ ಮತ್ತು ಚರ್ಮದ ವಸ್ತುಗಳು ಸಹ ಅಗ್ಗವಾಗುತ್ತವೆ.

ಕೇಂದ್ರ ಸರ್ಕಾರ(Central Government) 10,000 ಕೋಟಿ ರೂಪಾಯಿಗಳ ಯೋಜನೆಯೊಂದಿಗೆ ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ಬಲವನ್ನು ನೀಡಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲದೇ ಪ್ರಥಮ ಬಾರಿಗೆ ಐದು ಲಕ್ಷ ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ಉದ್ಯಮಿಗಳಿಗೆ 2 ಕೋಟಿ ರೂಪಾಯಿಗಳ ಸಾಲವನ್ನು ಸರ್ಕಾರ ನೀಡಲಿದೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಡಿಜಿಟಲ್(Digital) ಕಲಿಕಾ ಸಂಪನ್ಮೂಲಗಳಿಗೆ ಉತ್ತಮವಾದ ಉತ್ತೇಜನವನ್ನು ನೀಡಲು ಎಲ್ಲಾ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್(Broadband) ಸಂಪರ್ಕವನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

36 ಔಷಧಿಗಳ ಮೇಲಿನ ಸುಂಕ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು  ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಡೇ ಕೇರ್ ಸೆಂಟರ್(Cancer Day Care Center) ನಿರ್ಮಿಸಲಾಗುವುದು. ಜೊತೆಗೆ ಕ್ಯಾನ್ಸರ್ ಚಿಕಿತ್ಸೆಗೆ ಔಷಧ ದರಗಳು ಅಗ್ಗವಾಗಲಿವೆ. 6 ಜೀವ ರಕ್ಷಕ ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗುವುದು ಎಂದು ಅವರು ಹೇಳಿದರು.

ಬಜೆಟ್ ಮಂಡನೆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ, ಈ ಬಜೆಟ್ ಜನರ ಭಾವನೆಗಳಿಗೆ ಸ್ಪಂದಿಸಿದೆ. ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿಕ್ಷಣ(Education), ಆರೋಗ್ಯ(Health) ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ ಅಂತ ಸಚಿವೆ ಹೇಳಿದ್ದಾರೆ.

ವಿನಾಯಿತಿಯು ಮಧ್ಯಮ ವರ್ಗ ಮತ್ತು ಸಂಬಳ ಪಡೆಯುವ ಉದ್ಯೋಗಿಗಳಿಗೆ ದೊಡ್ಡ ಪ್ರಯೋಜನವನ್ನು ನೀಡುತ್ತದೆ ಎಂದು ಮೋದಿ ಶ್ಲಾಘಿಸಿದ್ದಾರೆ. ಈ ವರ್ಷದ ಬಜೆಟ್ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವ ಎನ್‌ಡಿಎ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : ಶಿವಣ್ಣರ ಆರೋಗ್ಯ ಕಾಳಜಿ ತೆಗೆದುಕೊಂಡಿದ್ದ ಶಾಸಕ ಭೀಮಣ್ಣ ನಾಯ್ಕ.

ಪರಮಾನಂದ ಕೊಣ್ಣೂರು ಅಂದರೆ ಪೊಲೀಸ್ ಇಲಾಖೆಗೆ ಹೆಮ್ಮೆ.

ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ವ್ಯವಹಾರದ ವಿರುದ್ದ ದೇಶಪಾಂಡೆ ಗರಂ.