ಅಂಕೋಲಾ : ತಾಲೂಕಿನ ಶಿರೂರಿನ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಯೇನೋ ನಡೆಯುತ್ತಿದೆ. ಆದರೆ ಮುಖ್ಯವಾಗಿ ಸಿಗಬೇಕಾದ ಮೂವರು ಪತ್ತೆಯಾಗುತ್ತಾರೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಉತ್ತರಕನ್ನಡ ಜಿಲ್ಲಾಡಳಿತ, ಕಾರವಾರ ಶಾಸಕ ಸತೀಶ್ ಸೈಲ್, ಜಿಲ್ಲಾ ಪೊಲೀಸ್ ಇಲಾಖೆ ಕಠಿಣವಾದ ಪ್ರಯತ್ನ ಮಾಡುತ್ತಿದೆ. ಈಗಾಗಲೇ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಅತ್ಯಾಧುನಿಕ ದ್ರೋಣ್ ಸಹಾಯದಿಂದ ನದಿಯ ಇಂಚಿಂಚು ಭಾಗವನ್ನ ಶೋಧಿಸಿದೆ. ಮುರರಿಂದ ನಾಲ್ಕು ಸ್ಥಳವನ್ನ ಗುರುತಿಸಿದೆ. ಇಂತಹ ಕಡೆಗಳಲ್ಲಿ ವಾಹನ, ಇಂಥ ಕಡೆಗಳಲ್ಲಿ ವಿದ್ಯುತ್ ಟವರ್, ರೆಲಿಂಗ್, ಕ್ಯಾಬಿನ್ ಇದೆ ಎಂಬುದರ ಬಗ್ಗೆ ತಿಳಿಸಿದೆ.
ಆದರೆ ನದಿಯಲ್ಲಿ ಬಿದ್ದ ಕಲ್ಲು ಮತ್ತು ಮಣ್ಣುಗಳನ್ನ ಎತ್ತುವುದೇ ಸಾಹಸದ ಕೆಲಸ. ಈಗಾಗಲೇ 12 ದಿನದ ಕಾರ್ಯಾಚರಣೆ ಮುಂದುವರಿಸಲಾಗಿದೆ. ಇನ್ನೂ ಫ್ಲೋಟಿಂಗ್ ಜಟ್ಟಿ ತರಿಸಿ ನದಿಯಲ್ಲಿ ಶೋಧ ಮಾಡುವ ಕೊನೆಯ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಶಾಸಕ ಸತೀಶ್ ಸೈಲ್ ಕೂಡ ಶ್ರಮಿಸುತ್ತಿದ್ದಾರೆ.
ನೇವಿ, ಆರ್ಮಿ ಸೇರಿ ಎಲ್ಲರೂ ಕೂಡ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ನದಿಯಲ್ಲಿ ಬಿದ್ದಿರುವ ಮಣ್ಣು, ಕಲ್ಲುಗಳನ್ನ ಎತ್ತುವುದೇ ದೊಡ್ಡ ಕೆಲಸವಾಗಿದೆ. ಮಣ್ಣು ಕಲ್ಲುಗಳನ್ನ ಎತ್ತಿದರೆ ಮಾತ್ರ ನಾಪತ್ತೆಯಾದವರು ಸಿಗಬಹುದು. ಅವರ ವಾಹನ, ವಸ್ತುಗಳು ಸಿಗಬಹುದಾಗಿದೆ. ಇಲ್ಲದಿದ್ದಲ್ಲಿ ತುಂಬಾ ಕಷ್ಟ ಎದುರಾಗಲಿದೆ.
ಅಂಕೋಲದ ಜಗನ್ನಾಥ, ಗಂಗೆಕೊಳ್ಳದ ಲೊಕೇಶ ಮತ್ತು ಕೇರಳದ ಅರ್ಜುನ್ ಪತ್ತೆಯಾಗುವವರಿಗೆ ಸಮಾಧಾನವಿಲ್ಲ. ಇಂದಿನ ಕಾರ್ಯಾಚರಣೆ ಹೇಗೆ ನಡೆಯುವುದೆಂಬ ಕುತೂಹಲ ಎಲ್ಲರಲ್ಲಿದೆ.