ಕಾರವಾರ(Karwar) : ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ(Bhagawan Shri Satyassai Baba) 99ನೇ ಜನ್ಮದಿನೋತ್ಸವ(Birthday Celebration) ಹಿನ್ನೆಲೆಯಲ್ಲಿ ಕಾರವಾರದ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ(Karwar Satyasai Seva Samiti) ಕಳೆದೊಂದು ತಿಂಗಳಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಭಾನುವಾರ ಮಂದಿರದಲ್ಲಿ ಬಾಲವಿಕಾಸ ಮಕ್ಕಳಿಂದ ಶ್ರೀ ಸಾಯಿ ಲಕ್ಷಾರ್ಚನೆ ಕಾರ್ಯಕ್ರಮ(Shri Sai Laksharchane) ಭಕ್ತಿಯಿಂದ ನಡೆಯಿತು.
ಮಂದಿರದ ಅರ್ಚಕರಾಗಿರುವಂತ ವಾಸುದೇವ ಭಟ್ ಮತ್ತು ಹಿರಿಯ ಸಾಯಿ ಭಕ್ತೆ(Sai Devotees) ಸುಧಾ ರಾಯ್ಕರ್ ಅವರ ಉಸ್ತುವಾರಿಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳಲ್ಲಿ ಅಧ್ಯಾತ್ಮಿಕತೆ(spiritual) ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರವಾರದ ಹಲವು ಮಕ್ಕಳು ಭಾಗವಹಿಸಿದ್ದರು.
ಬಾಲವಿಕಾಸ(Balavikasa) ಶಿಕ್ಷಕಿಯರಾದ ವಿಜಯಲಕ್ಷ್ಮಿ, ವರ್ಷಾ ವೆರ್ಣೇಕರ್, ರೂಪಾ ಭಟ್, ಕಾಂಚನ ಮತ್ತು ಪಾಲಕರು ಉಪಸ್ಥಿತರಿದ್ದರು.
ದಿನಾಂಕ 19ರಂದು ಮಂದಿರದಲ್ಲಿ ಮಹಿಳಾ ದಿನಾಚರಣೆ(Womens Day) ಕಾರ್ಯಕ್ರಮವಿದ್ದು ಅತಿಥಿಗಳಾಗಿ ಸರ್ಕಾರಿ ಆಯುಷ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ ಲಲಿತಾ ಜೆ ಶೆಟ್ಟಿ ಆಗಮಿಸಲಿದ್ದಾರೆ.
ನವೆಂಬರ್ 23ರಂದು ಜನ್ಮ ದಿನೋತ್ಸವ :
ನವೆಂಬರ್ 23 ರಂದು ಬಾಬಾರ ಜನ್ಮ ದಿನೋತ್ಸವ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ ಓಂಕಾರ(Omkar), ಸುಪ್ರಭಾತ(Suprabhata), ನಗರ ಸಂಕೀರ್ತನೆ(Nagara Samkeertane), ರಜತ ಸಿಂಹಾಸನ ಸಮರ್ಪಣೆ, ಹೋಮ, ಶ್ರೀ ಸತ್ಯ ಸಾಯಿ ವೃತ(Satyasai vruta), ಮಹಾ ಮಂಗಳಾರತಿ ಹಾಗೂ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ರುದ್ರ ಪಠಣ, ಭಜನೆ, ಜೂಲಾ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರೂ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಸತ್ಯಸಾಯಿ ಸೇವಾ ಸಮಿತಿ(Satyasayi Seva Samiti) ಕೋರಿಕೊಂಡಿದೆ.
ಇದನ್ನು ಓದಿ : ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರ ದುರ್ಮರಣ.