ಶಿರಸಿ (SIRSI) : ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಸವರೊನೊಬ್ಬ ಸೇತುವೆಯಿಂದ ನದಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಬನವಾಸಿಯ(BANAVASI) ಬುಗುಡಿಕೊಪ್ಪದ ಶ್ರೀ ಭೂತೇಶ್ವರ ದೇವಸ್ಥಾನದ ಹತ್ತಿರ ನಡೆದಿದೆ.
ಕೊಲ್ಲಾಪುರ (KOLLAPUR) ಶಿರೋಲ್ ನಿವಾಸಿ ಅವಿನಾಶ ಬಾಲಸೋ ಖೋತ (33) ಮೃತ ಯುವಕ. ಶಿರಸಿ-ಹಾವೇರಿ(SIRSI to HAVERI) ಮಾರ್ಗದಲ್ಲಿ ಘಟನೆ ಸಂಭವಿಸಿದ್ದು ಶಿರಸಿಯಿಂದ ಹಾವೇರಿ ಕಡೆಗೆ ಬೈಕ್ ನಲ್ಲಿ ಅವಿನಾಶ್ ತೆರಳುತ್ತಿದ್ದ. ಬೈಕ್ ನಿಯಂತ್ರಣ ತಪ್ಪಿ ಶ್ರೀ ಭೂತೇಶ್ವರ ದೇವಸ್ಥಾನದ ಬಳಿಯ ಧರ್ಮಾ ನದಿಗೆ (DHARMA RIVER) ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಧಾವಿಸಿ, ವ್ಯಕ್ತಿಯನ್ನು ಉಪಚರಿಸಲು ಮುಂದಾಗಿದ್ದರೂ ಬದುಕಲಿಲ್ಲ.
ಬನವಾಸಿ ಪೊಲೀಸ್ ಠಾಣೆಯಲ್ಲಿ (BANAVASI POLICE STATION) ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಅಂಗನವಾಡಿಗೆ ಗಟ್ಟಿ ಬೆಲ್ಲ. ಗೃಹಲಕ್ಷ್ಮಿ ನಿರಂತರ