ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಹಾರಾಷ್ಟ್ರ : ಮಹಾರಾಷ್ಟ್ರ ವಿಧಾನಸಭೆ(Maharastra Assembly) ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದ್ದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಶಾಕ್ ತಗುಲಿದ್ದರೇ, ಇತ್ತ ಬಾಲಿವುಡ್ ನಟನಿಗೂ ಆಘಾತ ಏರಗಿದೆ.
ಇನ್ ಸ್ಟಾಗ್ರಾಂ ನಲ್ಲಿ (Instragram) ಬರೊಬ್ಬರಿ 56 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದ ಅಭ್ಯರ್ಥಿಯನ್ನು ಮಹಾ ಮತದಾರ ಹೇಳ ಹೆಸರಿಲ್ಲದಂತೆ ಮನೆಗೆ ಕಳಿಸಿದ್ದಾನೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ನಟ ಎಜಾಜ್ ಖಾನ್ (Actor Ezaz Khan)ಚಂದ್ರಶೇಖರ್ ಆಜಾದ್ ರಾವಣ ಅವರ ‘ಆಜಾದ್ ಸಮಾಜ್ ಪಾರ್ಟಿ’ಯಿಂದ(Azad Samaj Party) ಸ್ಪರ್ಧಿಸಿದ್ದರು. ಆದರೆ ಎಜಾಜ್ ಖಾನ್ ಠೇವಣಿ ಕೂಡ ಸಿಗದೇ ಹೀನಾಯವಾಗಿ ಸೋಲನ್ನಪ್ಪಿದ್ದಾರೆ.
ಗೆಲ್ಲಲೇಬೇಕೆಂದು ಚುನಾವಣೆಯಲ್ಲಿ ಭರ್ಜರಿ ಪ್ರಚಾರ(Campaign) ಮಾಡಿದ್ದ ಎಜಾಜ್ ಖಾನ್, ತಾವು ಮಾತ್ರವಲ್ಲದೇ ಹಲವು ಇನ್ ಫ್ಲುಯೆನ್ಸರ್ ಗಳು, ಯೂಟ್ಯೂಬರ್ ಗಳು(Youtuber) ಮತ್ತು ಸಿನಿಮಾ(Cinema), ಸಿರಿಯಲ್ ಸ್ನೇಹಿತ, ನಟ-ನಟಿಯರಿಂದ ಪ್ರಚಾರ ಕೂಡ ನಡೆಸಿದ್ದರು. ವಿಶೇಷವೆಂದರೆ ನಟ ಎಜಾಜ್‌ಗೆ ಇನ್‌ಸ್ಟಾಗ್ರಾಂನಲ್ಲಿ 56 ಲಕ್ಷ (5.6M) ಫಾಲೋವರ್‌ಗಳಿದ್ದಾರೆ(Followers). ಆದರೂ ಅದು ಮತಗಳಾಗಿ ಪರಿವರ್ತನೆಯಾಗಿಲ್ಲ.
ಎಜಾಜ್ ಖಾನ್ ಅವರು ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ(Bigboss ex Contester) ಕೂಡ. ಅನೇಕ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ(Kannada), ತೆಲುಗು(Telugu), ತಮಿಳು ಸಿನಿಮಾಗಳಲ್ಲೂ(Tamilu Cinema) ಖಳನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಾನೊಬ್ಬ ರಾಜಕಾರಣಿಯೂ ಹೌದು ಎಂದು ಅವರು ಬರೆದುಕೊಂಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಬರೊಬ್ಬರಿ 56ಲಕ್ಷ ಫಾಲೋವರ್ಸ್ ಗಳಿದ್ದಾರೆ. ಅದಾಗ್ಯೂ ಇಂದು ಪ್ರಕಟವಾದ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಎಜಾಜ್ ಅವರು ಕೇವಲ 139 ಮತಗಳನ್ನು ಪಡೆದಿದ್ದಾರೆ. ಅವರ ಜನಪ್ರಿಯತೆ ಚುನಾವಣೆಯಲ್ಲಿ ಲೆಕ್ಕಕ್ಕೆ ಬಂದಿಲ್ಲ. ಅಚ್ಚರಿ ಎಂದರೆ ಎಜಾಜ್ ಅವರಿಗಿಂತಲೂ ಹತ್ತು ಪಟ್ಟು ಅಧಿಕ ಅಂದರೆ 1,222 ಮತಗಳು ನೋಟಾಕ್ಕೆ ಚಲಾವಣೆ ಆಗಿವೆ. ಇದರಿಂದ ಆ ನಟ ಸಾಕಷ್ಟು ಮುಜುಗರ ಅನುಭವಿಸಿದ್ದಾರೆ.
ಇದನ್ನು ಓದಿ : ಹಣ ಕೊಡದ್ದಕ್ಕೆ ಮಂಗಳಮುಖಿಯರ ರಂಪಾಟ
ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ. ಆರೋಪಿಗೆ ಶಿಕ್ಷೆ