ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ (Newdelhi) : ಭಾರತ ಕ್ರಿಕೆಟ್ ನ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್(Veerendra Sehwag) ದಾಂಪತ್ಯದಲ್ಲೂ ಬಿರುಕು ಮೂಡಿದೆ.  ಸೆಹ್ವಾಗ್‌ ಮತ್ತು ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಜೀವನ(Couple Life) ಮುಕ್ತಾಯ ಹಂತದಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಅಭಿಮಾನಿಗಳನ್ನ ವಿಚಲಿತಗೊಳಿಸಿದೆ.

ಸೆಹ್ವಾಗ್ ಮತ್ತು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ(Instragram) ಪರಸ್ಪರ ಅನ್‌ಫಾಲೋ(Unfollow) ಮಾಡಿದ್ದು ಶೀಘ್ರವೇ ವಿಚ್ಛೇದನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. 2004ರಲ್ಲಿ ವಿವಾಹವಾದ ಸೆಹ್ವಾಗ್ ಮತ್ತು ಆರತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹಲವಾರು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಕಳೆದ ದೀಪಾವಳಿ ಆಚರಣೆಯ(Deepavali Celebration) ಫೋಟೊ ಅಪ್ಲೋಡ್ ಮಾಡಿದಾಗ ತಾಯಿ, ಮಕ್ಕಳು ಮಾತ್ರವಿದ್ದು  ಪತ್ನಿ ಇದ್ದಿರಲಿಲ್ಲ ಕೆಲವು ವಾರಗಳ ಹಿಂದೆ ಕೇರಳದ ಪಾಲಕ್ಕಾಡ್‌ನಲ್ಲಿರುವ ವಿಶ್ವ ನಾಗಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೂ ಪತ್ನಿ ಆರತಿ ಕಾಣಿಸಿಕೊಂಡಿರಲಿಲ್ಲ. ಆದರೆ ವಿಚ್ಚೇದನ ಕುರಿತು ಇಲ್ಲಿಯವರೆಗೆ ಇಬ್ಬರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ. ಸೆಹ್ವಾಗ್‌ ಮತ್ತು ಆರತಿ ಪ್ರೀತಿಸಿ ಮದುವೆಯಾಗಿದ್ದರು. 2000ನೇ ಇಸ್ವಿಯಲ್ಲಿ ಆರಂಭಗೊಂಡ ಪ್ರೀತಿಗೆ 2004ರಲ್ಲಿ ದಾಂಪತ್ಯ ಜೀವನದಲ್ಲಿ ಒಂದಾಗಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ (International Cricket) 2015ರಲ್ಲಿ ನಿವೃತ್ತಿಯಾಗಿದ್ದ ಸೆಹ್ವಾಗ್ ನಂತರ ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿಯ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುವುದರ ಜೊತೆ ವಾಹಿನಿಗಳಲ್ಲಿ ಕ್ರಿಕೆಟ್ ನಿರೂಪಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ : ಹೊನ್ನಾವರ ಗೋ ಕಳ್ಳತನ ಮಾಡುತ್ತಿದ್ದ ಮೂವರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.

ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಜಾತ್ರೆಯ ಸಂಭ್ರಮ

ಸವಣೂರು ಅಗಲಿದ ವ್ಯಾಪಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾರವಾರ ಬೀದಿ ಬದಿ ವ್ಯಾಪಾರಸ್ಥರು.

ಕರ್ನಾಟಕ ಎಕ್ಸ್ಪ್ರೆಸ್ ಟ್ರೈನ್ ಅಪಘಾತ. 11 ಪ್ರಯಾಣಿಕರ ದುರ್ಮರಣ.