ಕಾರವಾರ(KARWAR) : ಬಿಜೆಪಿ ನಾಯಕರು ನೀಡಿದ ಮಾನಸಿಕ ಹಿಂಸೆಯಿಂದ ನೊಂದು ಸಿಎಂ ಪತ್ನಿ ಮುಡಾ ಸೈಟ್ ಗಳನ್ನು ವಾಪಾಸ್ ನೀಡಿದ್ದಾರೆಂದು ಸಚಿವ ಮಂಕಾಳ್ ವೈದ್ಯ (MANKAL VAIDYA) ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ(SIDDARAMAIHA) ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ಸಿಎಂ ಆಗಿ ಯಾವುದೇ ಆಸ್ತಿ ಮಾಡಿಲ್ಲ. ಅವರ ಪತ್ನಿಗೆ ಆಸ್ತಿಗಿಂತಲೂ ರಾಜ್ಯದ ಹಿತ ಮುಖ್ಯ ಎಂದರು.
ರಾಜಕೀಯ ಟೀಕೆಗಳಿಂದ ನೊಂದು ಮುಡಾ ಸೈಟ್ (MUDA SITE)ಗಳನ್ನ ಹಿಂತಿರುಗಿಸಿದ್ದಾರೆ. ಕಳೆದ 40 ವರ್ಷಗಳಿಂದ ಸಿಎಂ ಪತ್ನಿ ಸರಳವಾಗಿ ಜೀವನ ಮಾಡಿದ್ದಾರೆ. ಸಿಎಂ ಪತ್ನಿ ಅಂತಾ ಯಾವತ್ತೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದ ಸಚಿವರು, ಇಂದು ಅವರು ಸೈಟ್ ರಿಟರ್ನ್ ಮಾಡಿದನ್ನು ನೋಡಿ ನಂಗೆ ದುಃಖ ಆಯ್ತು. ಬಿಜೆಪಿಯವರಿಗೆ (BJP) ಕೈ ಮುಗಿದು ಕೇಳಿ ಕೊಳ್ತೇನೆ, ಈಗ ಮುಡಾದ 14 ಸೈಟ್ ಗಳನ್ನ ಹಿಂತಿರುಗಿಸಿ ಆಗಿದೆ. ಈಗಲಾದರೂ ನೆಮ್ಮದಿಯಿಂದ ರಾಜ್ಯದ ಅಭಿವೃದ್ಧಿ ಮಾಡಲು ಬಿಡಿ ಎಂದು ವೈದ್ಯ ಹೇಳಿದ್ದಾರೆ. ಚುನಾವಣೆ ಬಂದಾಗ ರಾಜಕೀಯ ಮಾಡೋಣ ಈಗ ಇದನ್ನ ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದರು.
ಇದನ್ನು ಓದಿ : ಭಟ್ಕಳದಲ್ಲಿ ಅಪರಿಚಿತ ಮೃತದೇಹ ಪತ್ತೆ. ಪೊಲೀಸರ ದೌಡು