ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ನಗರದ ಬಾಂಬೆಚಾಳ ಟೌನಶಿಪ್’ನಲ್ಲಿರುವ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ  ಪತ್ತೆಯಾಗಿದೆ.

ಸ್ಥಳೀಯ ನಿವಾಸಿ ಸುಧಾ ಗಣಪತಿ ವೆರ್ಣೇಕರ (58) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಸುಧಾ ಬಾಂಬೆಚಾಳ ಟೌನಶಿಪ್’ನಲ್ಲಿರುವ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಇಂದು ಇವರ ಮನೆಯ ಹತ್ತಿರ ಕಮಟು  ವಾಸನೆ ಬರುತ್ತಿರುವುದನ್ನು ಗಮನಿಸಿದಾಗ, ಇವರು ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಮೃತರ ಅಣ್ಣನ ಮಗ ದಾಂಡೇಲಿ ನಗರ ಠಾಣೆಗೆ(Dandeli Town Station) ಮಾಹಿತಿಯನ್ನು ನೀಡಿದ್ದಾರೆ.

ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಇದು ಸಹಜ ಸಾವು ಎಂದು ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಖ್ಯಾತ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಮದುವೆಯಾಗಿದ್ದೇನೆ. ಅಭಿಮಾನಿಗಳ ತಲೆ ಕೆಡಿಸಿದ ಬಾಲಿವುಡ್‌ ನಟಿ.

ಸಚಿವರ ವಿರುದ್ಧ ಸುಳ್ಳು ವಿಡಿಯೋ ಹರಡಿದ ಇಬ್ಬರ ಬಂಧನ.