ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)  ಕ್ಯಾನ್ಸ‌ರ್ ಸರ್ಜರಿಗೆ ಒಳಗಾಗಿದ್ದ ಖ್ಯಾತ ನಟ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಡಿಸ್ಟಾರ್ಜ್ ಆಗಿದ್ದಾರೆ.

ಕನ್ನಡದ ಸ್ಯಾಂಡಲ್ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೇರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆ ಅವರಿಗೆ ಸರ್ಜರಿ ಕೂಡ ಯಶಸ್ವಿಯಾಗಿ ಮಾಡಲಾಗಿತ್ತು. ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ಗೀತಾ ಶಿವರಾಜಕುಮಾರ್ ಮತ್ತು ಶಿವಣ್ಣ ನಾನು ಆರೋಗ್ಯವಾಗಿದ್ದೇನೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇನೆ ಎಂದಿದ್ದರು. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಟಾರ್ಜ್‌ ಆಗಿದ್ದು, ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ.

ಶಿವಣ್ಣ ಅವರಿಗೆ ಅಮೇರಿಕಾದ ಮಿಯಾಮಿ ಕ್ಯಾನ್ಸ‌ರ್ ಇನ್ಸ್‌ಟಿಟ್ಯೂಟ್‌ನಲ್ಲಿ ಸರ್ಜರಿ ನಡೆದಿತ್ತು. ಬಳಿಕ ಎರಡು ಬಾರಿ ಅವರಿಗೆ ಮೆಡಿಕಲ್ ಚೆಕಪ್ ಆಗಿತ್ತು. ಇದೀಗ ಶಸ್ತ್ರ ಚಿಕಿತ್ಸೆಯ ಪ್ರಕ್ರಿಯೆ  ಪೂರ್ಣಗೊಂಡಿದ್ದು, ಶಿವಣ್ಣ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಶಿವಣ್ಣ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.

ಈ ತಿಂಗಳ ಕೊನೆಯ ವಾರದವರೆಗೂ ಶಿವಣ್ಣ ಅಮೇರಿಕಾದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಜನವರಿ 24ರ ಬಳಿಕ ಅವರು ಬೆಂಗಳೂರಿಗೆ ವಾಪಸ್ ಆಗುವ ನಿರೀಕ್ಷೆ ಇದೆ.

ಇದನ್ನು ಓದಿ : ಸರ್ಕಾರದ ದುರಾಡಳಿತ ಖಂಡಿಸಿ ಭಟ್ಕಳದಲ್ಲಿ ಬಿಜೆಪಿ ಪ್ರತಿಭಟನೆ.

ಕೇಕ್ ತಿಂದು 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ.

ಗಂಗೊಳ್ಳಿ ಪಂಚಾಯತ್ ನಲ್ಲಿ ಮೌಲ್ವಿಯಿಂದ ದುವಾ, ಅರ್ಚಕರಿಂದ ಗಣಹೋಮ.

ಕಾನಸ್ಟೇಬಲ್ ಒಬ್ಬರನ್ನ ಹನಿಟ್ರ್ಯಾಪ್ ಖೆಡ್ಡಾಕ್ಕೆ ದೂಡಿದ ಐನಾತಿ ಲೇಡಿ.

ಗೀತಾ ಪ್ರಕರಣ. ಕೊಲೆ ಆರೋಪಿಯ ಬಾಡೂಟ ಉಂಡ ದೋಸ್ತರು.