ಉಡುಪಿ(Udupi) : ಮನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಗೋವಾ ಮದ್ಯವನ್ನ ಉಡುಪಿ ಅಬಕಾರಿ ಇಲಾಖೆ(Udupi Exice Department) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಕಾರ್ಕಳ ತಾಲೂಕು(Karkal Taluku) ಬೋಳ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅವಿನಾಶ್ ಮಲ್ಲಿ ಎಂಬುವರಿಗೆ ಸಂಬಂಧಿಸಿದ ಎರಡು ಮನೆಗಳಿಂದ ಲಕ್ಷಾಂತರ ರೂ. ಮೌಲ್ಯದ 200 ಕ್ಕೂ ಅಧಿಕ ಬಾಕ್ಸ್ ಮದ್ಯ(Liquor) ಜಪ್ತಿಪಡಿಸಲಾಗಿದೆ.
ವಶಪಡಿಸಿಕೊಂಡ ಮದ್ಯ ಗೋವಾದಿಂದ(Goa) ಅಕ್ರಮವಾಗಿ ತರಿಸಿಕೊಂಡಿರುವ ಮಾಹಿತಿ ಇದ್ದು, ಮನೆಯಿಂದಲೇ ವ್ಯವಹಾರ ನಡೆಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ಅಬಕಾರಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಮದುವೆ ಮನೆಯಲ್ಲಿ ವಧುವಿನ ಚಿನ್ನ ಕದ್ದ ಕಳ್ಳರು
ಶರಾವತಿ ಹಿನ್ನೀರಿನಲ್ಲಿ ತೆಪ್ಪ ದುರಂತ