ಕಾರವಾರ(KARWAR ) : ತಾಲೂಕಿನ ಹಣಕೋಣ ಗ್ರಾಮದಲ್ಲಿ ಉದ್ಯಮಿಯೋರ್ವನ ಭೀಕರ ಹತ್ಯೆ (MURDER) ಮಾಡಿದ ಘಟನೆ ಬೆಳಿಗ್ಗೆ ನಡೆದಿದೆ.

ರಾಜು ನಾಯ್ಕ (52) ಹತ್ಯೆಗೊಳಗಾದ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ ಮನೆಗೆ ನುಗ್ಗಿದ ಐವರು ಅಪರಿಚಿತರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ವೈಶಾಲಿ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ನಂತರ ಕೊಲೆಗೆ ಬಳಸಿದ ಚಾಕು, ತಲ್ವಾರ್ ಬಿಸಾಡಿ ಪರಾರಿಯಾಗಿದ್ದಾರೆ. ಗಾಯಗೊಂಡ ರಾಜು ಪತ್ನಿ ವೈಶಾಲಿ ಅವರಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಾತೇರಿ ದೇವಿಯ ಜಾತ್ರೆಯ ಕಾರಣಕ್ಕೆ  ರಾಜು ನಾಯ್ಕ ಊರಿಗೆ ಆಗಮಿಸಿದ್ದರು. ಇಂದು ವಾಪಾಸ್ ಪುನಾ ಗೆ ಹೋಗುವ ತಯಾರಿಯಲ್ಲಿದ್ದರು. ಬೆಳಿಗ್ಗೆ ಮನೆಯ ಬೆಲ್ ಆಗಿದ್ದರಿಂದ ಬಾಗಿಲು ತೆರೆದಿದ್ದರು.

ಚಿತ್ತಾಕುಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಸ್ಪಿ ನಾರಾಯಣ್ ಅವರು ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಚಿತ್ತಾಕುಲ ಪೊಲೀಸರು(CHITTAKUL POLICE) ಸ್ಥಳೀಯರ ವಿಚಾರಣೆ ನಡೆಸಿದ್ದಾರೆ.

ರಾಜು ನಾಯ್ಕ ಪುನಾದಲ್ಲಿ ದೊಡ್ಡ ಪ್ರಮಾಣದ ಉದ್ಯಮ ಹೊಂದಿದ್ದರು. ಸಾಕಷ್ಟು ಕಾಸು ಇತ್ತು ಎನ್ನಲಾಗಿದೆ. ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ.

ಇದ್ದನ್ನು ಓದಿ : ಭಟ್ಕಳದಲ್ಲಿ ಪ್ರತಿಭಟನಾ ನಿರತರ ಬಂಧನ

ಕುಸಿದ ಸೇತುವೆಯಿಂದ ಬಿದ್ದು ದಂಪತಿಗೆ ಗಾಯ

ಗಂಗಾವಳಿ ನದಿಯಲ್ಲಿ ಈಶ್ವರ್ ಮಲ್ಪೆ ಹುಡುಕಾಟ