ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ  ಮಾರ್ಚ್ 9 ರಂದು ಬೆಳಿಗ್ಗೆ 6 ಗಂಟೆಗೆ ಕಾರವಾರ ರವೀಂದ್ರನಾಥ ಟಾಗೋರ ಕಡಲ ತೀರದಿಂದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ” Drugs & Cyber Crime free Karnataka & Fitness for All” ಥೀಮ್‌ ಅಡಿಯಲ್ಲಿ ಕರ್ನಾಟಕ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟವನ್ನು ಆಯೋಜಿಸಲಾಗಿದೆ.

ಪೊಲೀಸ್ ರನ್ -2025 ರ(Police Run) ಮ್ಯಾರಾಥಾನ್(Marathon) 5K ಓಟದಲ್ಲಿ ಸಾರ್ವಜನಿಕರು ಕ್ಯೂಆ‌ರ್ ಕೋಡ್ ಸ್ಕ್ಯಾನ್ ಮಾಡಿ ಹೆಸರುಗಳನ್ನು ನೊಂದಾಯಿಸಿಕೊಳ್ಳುವುದು ಹಾಗೂ ಮ್ಯಾರಾಥಾನ್ ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

5K ಮ್ಯಾರಾಥಾನ್ ಓಟದಲ್ಲಿ ಮೊದಲ 3 ಓಟಗಾರರಿಗೆ ಆಕರ್ಷಕ ನಗದು ಬಹುಮಾನ, ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಮತ್ತು ಮ್ಯಾರಾಥಾನ್ ಮುಗಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ಹಾಗೂ ಪದಕವನ್ನು ನೀಡಲಾಗುವುದು ಎಂದು ಪೊಲೀಸ್ ಅಧೀಕ್ಷಕ ನಾರಾಯಣ ಎಂ ತಿಳಿಸಿದ್ದಾರೆ.

ಇದನ್ನು ಓದಿ : ಜಿಲ್ಲಾಧಿಕಾರಿ ಆಗಬೇಕೆಂದ ವಿದ್ಯಾರ್ಥಿನಿಯನ್ನು  ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿ.

ಬೈಕ್ ನಿಯಂತ್ರಣ ತಪ್ಪಿ ಬಿದ್ದು ರೈಲ್ವೆ ಸಿಬ್ಬಂದಿ ಸಾವು

ಮಿಡಿವ ಹೃದಯಕ್ಕೆ ನೆರವಾದ ಸಚಿವರ ಪುತ್ರಿ ಬೀನಾ ವೈದ್ಯ