ಅಂಕೋಲಾ: ತಾಲ್ಲೂಕಿನ ಕೇಣಿಯಲ್ಲಿ ಕಳಪೆ ಕಾಮಗಾರಿ ನಡೆಸಿ ಚರಂಡಿ ಕುಸಿದು ಬಿದ್ದು  ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದ ಗುತ್ತಿಗೆದಾರನನ್ನ ತರಾಟೆ ತೆಗೆದುಕೊಂಡು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜೂನ್ 9 ರಂದು ಕೇಣಿಯ ಹರಿಕಂತ್ರವಾಡದಲ್ಲಿ ಅಂದಾಜು 38 ಅಡಿ ಉದ್ದದ ಚರಂಡಿ ಕುಸಿದು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೆ. ಆರ್.ಐ.ಡಿ.ಎಲ್ ವತಿಯಿಂದ ನಡೆದ ಕಾಮಗಾರಿ ಕಳಪೆಯಾಗಿದ್ದು ನೈತಿಕ ನಿಯಮ ಮೀರಿ ಕಾಮಗಾರಿ ನಡೆಸಿದ್ದರು. ಈ  ಬಗ್ಗೆ ಇ ಸಮಚಾರದಲ್ಲಿ  ಸುದ್ದಿ ಪ್ರಕಟವಾಗಿತ್ತು.  ಕಾಮಗಾರಿಯ ಉಸ್ತುವಾರಿ ರಾಜೇಶ್ ನಾಯ್ಕ  ಸ್ಥಳಕ್ಕೆ ಬಂದಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಾರ್ವಜನಿಕರು ಗುತ್ತಿಗೆ ಕಾರ್ಯ ನಡೆಸಿದ ರಾಜೇಶರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದಾಜು ಮೊತ್ತ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ಒಳಚರಂಡಿ ಸಂಪೂರ್ಣ ಕಳಪೆಯಾಗಿದ್ದು, ಅಧಿಕಾರಿಗಳು ಇಲ್ಲವೇ ಈ ಕಾಮಗಾರಿಯ ಇಂಜಿನೀಯರ್ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಇತರೆ ಭಾಗದ ಸದಸ್ಯರು ಇದಕ್ಕೆ ಧ್ವನಿಗೂಡಿಸಿ ತರಾಟೆಗೆ ತೆಗೆದುಕೊಂಡರು. ತಾತ್ಕಾಲಿಕವಾಗಿ ಮರಳಿನ ಚೀಲವನ್ನು ಚರಂಡಿಯ ಕುಸಿದ ಭಾಗದಲ್ಲಿ ಹಾಕಿ ಸಾರ್ವಜನಿಕರ ಸಂಚಾರಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂದು ಹಿರಿಯ ಗ್ರಾಮ ಪಂಚಾಯಿತಿ ಸದಸ್ಯ ಉದಯ ವಾಮನ ನಾಯಕ ಹೇಳಿದರು. ಪುನಃ ಸಂಪೂರ್ಣ ಚರಂಡಿ ಕಾಮಗಾರಿಯನ್ನು ಪ್ರಾರಂಭಿಸಿ ಗುಣಮಟ್ಟದಲ್ಲಿ ಚರಂಡಿ ನಿರ್ಮಾಣ ಮಾಡುವಂತೆ ಸ್ಥಳೀಯರು ಗುತ್ತಿಗೆದಾರಾನಿಗೆ  ಹೇಳಿದ್ದಾರೆ.

ಒಂದೊಮ್ಮೆ ಕೆ.ಆರ್.ಐ.ಡಿ.ಎಲ್ ಅಥವಾ ಇಂಜಿನಿಯರ್ ಇಲ್ಲವೇ ಗುತ್ತಿಗೆ ಕಾಮಗಾರಿ ನೋಡಿಕೊಂಡ ವ್ಯಕ್ತಿ ಇದನ್ನು ಸರಿಪಡಿಸಿದೆ ಇದ್ದಲ್ಲಿ ನ್ಯಾಯಾಲಯದ ಮೂಲಕ ಪರಿಹಾರ ಕೇಳುವುದಾಗಿ ಸ್ಥಳೀಯರು ಎಚ್ಚರಿಸಿದರು.