ಗೋವಾ(GOA) : ಇಲ್ಲಿನ ಬಾಗಾ ಕಡಲತೀರದಲ್ಲಿ (BAGA BEACH) ಪ್ರವಾಸಿಗರಿದ್ದ ಪ್ರವಾಸಿ ಬೋಟ್  ಮುಗುಚಿಬಿದ್ದ ಘಟನೆ  ಗುರುವಾರ ನಡೆದಿದೆ.

ಘಟನೆಯಲ್ಲಿ ಇಬ್ಬರು ಪ್ರವಾಸಿಗರು ಗಾಯಗೊಂಡಿದ್ದು, ಇನ್ನುಳಿದವರು ಬಚಾವ್ ಆಗಿದ್ದಾರೆಂಬ  ಮಾಹಿತಿ ಲಭ್ಯವಾಗಿದೆ.
ಒಟ್ಟು ಸುಮಾರು 15 ಪ್ರವಾಸಿಗರು ಜಲ ಸಾಹಸ ಬೋಟ್ ನಲ್ಲಿದ್ದರು.  ಪ್ರವಾಸಿ ಬೋಟ್ ಮುಗುಚಿದ ಸಂದರ್ಭದಲ್ಲಿ ಲೈಫ್ ಗಾರ್ಡ್ (LIFE GUARD) ಸಿಬ್ಬಂದಿಗಳು ಸಮುದ್ರಕ್ಕೆ ಬಿದ್ದ ಪ್ರವಾಸಿಗರನ್ನೂ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಆದರೆ ಇಬ್ಬರು ಪ್ರವಾಸಿಗರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬೋಟ್ ಮಗುಚಿ ಬೀಳಲು  ನಿಖರವಾದ ಕಾರಣ ಗೊತ್ತಾಗಿಲ್ಲ. ಬೋಟ್ ನಲ್ಲಿ ತಾಂತ್ರಿಕ ದೋಷ ಅಥವಾ ಅಲೆಗೆ ಪಲ್ಟಿಯಾಗಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಶಾಸಕ ಮೈಕಲ್ ಲೋಬೊ(MICHEL LOBO) ಭೇಟಿ ನೀಡಿ ಘಟನೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನು ಓದಿ : ಆನ್ ಲೈನ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ. ಎರಡೇ ದಿನದಲ್ಲಿ ಹಣ ಕೊಡಿಸಲು ಪೊಲೀಸರು ಯಶಸ್ವಿ

ನಾರ್ತ್ ಕರ್ನಾಟಕ ಅಚೀವರ್ಸ್ ಪ್ರಶಸ್ತಿ ಪಡೆದ ಚೈತ್ರಾ

ರತನ್ ಟಾಟಾ ನಿಧನಕ್ಕೆ ಪ್ರೇಯಸಿ ಬಾವುಕ ವಿದಾಯ

ಉದ್ಯಮಿ ರತನ್ ಟಾಟಾ ಜೀವನ ಸಾಧನೆಯೇ ರೋಚಕ