ಕಾರವಾರ(KARWAR) : ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು(CATTLE) ಕಳ್ಳರ ಹಾವಳಿ ಜಾಸ್ತಿಯಾಗಿದೆ. ಕುಣಿಕೆ ಹಾಕಿ ಮುಗ್ದ ದನಕರುಗಳನ್ನ ಹಿಡಿಯುವ ದಂದೆ ಸದ್ದಿಲ್ಲದೇ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಡವಾಡ ಗ್ರಾಮ ಪಂಚಾಯತ (KADWAD GRAMA PANCHAYAT) ವ್ಯಾಪ್ತಿಯಲ್ಲಿ  ಕಳೆದ ಕೆಲ ದಿನಗಳಿಂದ ದನಕರುಗಳು ನಾಪತ್ತೆಯಾಗುತ್ತಿವೆ. ಗ್ರಾಮದ ಪ್ರಗತಿಪರ ರೈತ ವಾಮನ ಕಳಸ ಎನ್ನುವವರ ಆಕಳು ಕುಣಿಕೆಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.  ಆಕಳು ಹುಡುಕುತ್ತಾ ಹೋದಾಗ ಕುಣಿಕೆಯಲ್ಲಿ ಇರುವುದು ಪತ್ತೆಯಾಗಿದೆ. ಅಲ್ಲಿಂದ ಆಕಳು ಬಿಡಿಸಿಕೊಂಡು ಬಂದ ರೈತ ಗ್ರಾಮ ಪಂಚಾಯತ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಕುಣಿಕೆ  ಹಾಕಿದ  ಸ್ಥಳವನ್ನು ತೋರಿಸಿದ್ದಾರೆ. 

  ಗ್ರಾಮದಲ್ಲಿ ಬೆಳಗಿನ ವೇಳೆಗೆ  ಕಾರು(CAR),  ಪಿಂಕ್ ಅಂಪ್ಓಪನ್  ವಾಹನ ಓಡಾಡುತ್ತಿವೆ ಎಂದು ಆರೋಪಿಸಲಾಗಿದೆ.  ಕುಣಿಕೆ ಹಾಕಿ  ಮುಗ್ದ  ದನಕರುಗಳನ್ನು ಹಿಡಿದು ಬೇರೆಡೆಗೆ ಸಾಗಿಸುತ್ತಿದ್ದಾರೆ.  ಸ್ಥಳೀಯ ಕ್ರಿಮಿನಲ್ ಕೇಸ್ ಇದ್ದವರೇ ಇಂಥ ದಂಧೆ ಮಾಡುತ್ತಿದ್ದಾರೆ ಎನ್ನುವ ಗುಮಾನಿ ಎದ್ದಿದೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕನ್ನಡ ರಕ್ಷಣಾ ವೇದಿಕೆ(KANNANDA RAKSHANA VEDIKE) ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಹೇಳಿದ್ದಾರೆ.

ಗ್ರಾಮದಲ್ಲಿ   ರಾತ್ರಿಯಿಂದ ಬೆಳಗಿನವರೆಗೆ ಬಿಟ್ ವ್ಯವಸ್ಥೆ ಮಾಡಬೇಕು.  ಬೆಳಗಿನ ಜಾವ ಜಾವ ಕಾರು ಓಪನ್ ರಿಕ್ಷಾಗಳನ್ನು ತಪಾಸಣೆ ಮಾಡಬೇಕು. ಅಷ್ಟೇ ಅಲ್ಲದೇ ಗೋವಾ ಕಡೆಯಿಂದ ಬರುವ  ವಾಹನಗಳನ್ನು ಕಡ್ಡಾಯವಾಗಿ ತಪಾಸಸಬೇಕೆಂದು ಪೊಲೀಸ್ ಇಲಾಖೆಗೆ (POLICE DEPARTMENT) ಅವರು ಒತ್ತಾಯಿಸಿದ್ದಾರೆ.

ಇದನ್ನು ಓದಿ : ಬಾಗಾ ಬೀಚಲ್ಲಿ ಪ್ರವಾಸಿ ಬೋಟ್ ಪಲ್ಟಿ

ಆನ್ ಲೈನ್ ವಂಚನೆಗೊಳಗಾಗಿ ಹಣ ಕಳೆದುಕೊಂಡವನಿಗೆ ಹಣ ವಾಪಾಸ್ ಕೊಡಿಸುವಲ್ಲಿ ಪೊಲೀಸರು ಯಶಸ್ವಿ

ನಾರ್ತ್ ಕರ್ನಾಟಕ ಅಚೀವರ್ಸ್ ಪ್ರಶಸ್ತಿ ಪಡೆದ ಚೈತ್ರಾ ಕೋಟಾರಕರ್

ರತನ್ ಟಾಟಾ ನಿಧನಕ್ಕೆ ಪ್ರೇಯಸಿ ಬಾವುಕ ವಿದಾಯ