ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಬೆಂಗಳೂರು(Banglore) : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL) ಪಂದ್ಯಾವಳಿಯಲ್ಲಿ ಉತ್ತರಕನ್ನಡ ಜಿಲ್ಲಾ ಅಧಿಕೃತ ತಂಡವಾದ “ಉತ್ತರ ಕನ್ನಡ ಸ್ಟಾಲಿಯನ್ಸ್” (Uttara Kannada Stallions) ಭರ್ಜರಿ ಪ್ರದರ್ಶನ ನೀಡಿ ಮಹಾ ವಿಜಯ (CHAMPIONS) ಸಾಧಿಸಿದೆ..! ಕಪ್ ಗೆದ್ದು ಉತ್ತರಕನ್ನಡ ಜಿಲ್ಲೆಯ ಕೀರ್ತಿ ಪತಾಕೆಯನ್ನು ರಾಜ್ಯಮಟ್ಟದಲ್ಲಿ ಹಾರಿಸಿದೆ..!

ಉತ್ತರ ಕನ್ನಡದ ಮೇಲಿನ ಪ್ರೀತಿ ಮತ್ತು ಜಿಲ್ಲೆಯ ಯುವ ನಾಯಕರ ಜಂಟಿ ಸಂಕಲ್ಪ: ತಂಡದ ಮುಖ್ಯ ಮಾಲೀಕರಾದ (Owner) ಬೆಂಗಳೂರಿನ ವಿನಾಯಕ ಘೋಷ್ ಅವರು ರಾಜ್ಯದ ರಾಜಧಾನಿಯವರು ಆಗಿದ್ದರೂ ಸಹ ನಮ್ಮ ಉತ್ತರ ಕನ್ನಡ ಜಿಲ್ಲೆಯ ಮಣ್ಣಿನ ಮೇಲಿನ ಅಪಾರ ಗೌರವ ಮತ್ತು ಪ್ರೀತಿಯಿಂದ “ಉತ್ತರ ಕನ್ನಡ ಸ್ಟಾಲಿಯನ್ಸ್” ತಂಡವನ್ನು ಮುನ್ನಡೆಸಲು ಮುಂದೆ ಬಂದರು. ಅವರ ಈ ಅದ್ಭುತ ನಿರ್ಧಾರಕ್ಕೆ ಸಾಥ್ ನೀಡಿ, ನಮ್ಮ ಉತ್ತರಕನ್ನಡ ಜಿಲ್ಲೆಯ ತಂಡವನ್ನು ರಾಜ್ಯಮಟ್ಟದಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲೇಬೇಕು ಎಂಬ ಹಠದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರರೂ ಹಾಗೂ ಸಹ-ಮಾಲೀಕರೂ (Co-owners) ಆದ ಮುಂಡಗೋಡು ತಾಲೂಕು ಕಬಡ್ಡಿ ಅಸೋಸಿಯೇಷನ್) ಅಧ್ಯಕ್ಷರಾದ ಬಮ್ಮು ಪಟಕಾರೆ ಮತ್ತು ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿಯಾದ ಯಲ್ಲಾಪುರದ ವಿಠ್ಠು ಶೆಳಕೆ ಅವರು ಇವರೊಂದಿಗೆ ಕೈಜೋಡಿಸಿದರು.ಉತ್ತರ ಕನ್ನಡ ಜಿಲ್ಲೆಯ ಕಬಡ್ಡಿ ಕ್ರೀಡೆಯನ್ನು ತಳಮಟ್ಟದಿಂದ ಅತ್ಯಂತ ಬಲಿಷ್ಠವಾಗಿ ಬೆಳೆಸಬೇಕೆಂಬ ಈ ಮೂವರ ಜಂಟಿ ಕನಸು ಮತ್ತು ಒಗ್ಗಟ್ಟಿನ ಶ್ರಮಕ್ಕೆ ಈ ‘ಮಹಾಕಪ್’ ಅತ್ಯುನ್ನತ ಗೌರವ ತಂದುಕೊಟ್ಟಿದೆ.

ಅಪ್ರತಿಮ ತರಬೇತಿ ಮತ್ತು ಕ್ರೀಡಾಪಟುಗಳ ಅದ್ಭುತ ಪ್ರದರ್ಶನ: ಮೈದಾನದಲ್ಲಿ ನಮ್ಮ ಆಟಗಾರರನ್ನು ಸಿಂಹಗಳಂತೆ ಮುನ್ನಡೆಸಿದ ಹೆಡ್ ಕೋಚ್ (Head Coach) ಕೆ.ವಿ.ರಾಜೇಶ್ ಹಾಗೂ ಅಸಿಸ್ಟೆಂಟ್ ಕೋಚ್ (Assistant Coach) ಶ್ರೀಕಾಂತ್ ಅವರ ಅತ್ಯುತ್ತಮ ತರಬೇತಿ ಮತ್ತು ರಣತಂತ್ರಗಳು ಈ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾಗಿವೆ. ಇವರ ಮಾರ್ಗದರ್ಶನದಲ್ಲಿ ಮೈದಾನದಲ್ಲಿ ಬೆವರು ಹರಿಸಿ, ಒಗ್ಗಟ್ಟಿನಿಂದ ಆಟವಾಡಿ ವಿಜಯದ ಪತಾಕೆ ಹಾರಿಸಿದ ತಂಡದ ಎಲ್ಲಾ ಆಟಗಾರರಿಗೂ ನಮ್ಮ ಹೃದಯಪೂರ್ವಕ ಸಲಾಂ! ಉತ್ತರ ಕನ್ನಡದ ಕಬಡ್ಡಿ ತಾಕತ್ತು ಏನೆಂಬುದನ್ನು ಇಡೀ ಕರ್ನಾಟಕಕ್ಕೆ ಸಾಬೀತುಪಡಿಸಿದ್ದೀರಿ.

ಈ ಐತಿಹಾಸಿಕ ಜಯದ ಹಿನ್ನೆಲೆಯಲ್ಲಿ, ನಮ್ಮ ಹೆಮ್ಮೆಯ ಕ್ರೀಡಾ ಪ್ರೇಮಿಗಳಾದ ವಿನಾಯಕ ಘೋಷ್, ಬಮ್ಮು ಪಟಕಾರೆ, ವಿಟ್ಟು ಶೇಳಕೆ, ಜಿಲ್ಲಾ ಅಧ್ಯಕ್ಷರಾದ ಶ್ರೀಧರ್ ನಾಯ್ಕ್, ರೆಫ್ರಿಯಾಗಿ ಕಾರ್ಯನಿರ್ವಹಿಸಿದ ಮುಂಡಗೋಡ ತಾಲೂಕಿನ ಮೈನಳ್ಳಿಯ ಸಿ.ಕೆ. ವಿಜಯಕುಮಾರ್, ಕೋಚ್‌ಗಳಾದ ಕೆ.ವಿ. ರಾಜೇಶ್, ಶ್ರೀಕಾಂತ್ ಅವರಿಗೆ ಹಾಗೂ ವಿಜೇತ ‘ಉತ್ತರ ಕನ್ನಡ ಸ್ಟಾಲಿಯನ್ಸ್’ ತಂಡದ ಎಲ್ಲಾ ಆಟಗಾರರಿಗೆ ನಮ್ಮ ಇಡೀ ಸಮಾಜ, ಸ್ನೇಹಿತರ ಬಳಗ ಹಾಗೂ ಮುಂಡಗೋಡು, ಯಲ್ಲಾಪುರ, ಹಳಿಯಾಳ ಸೇರಿದಂತೆ ಇಡೀ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರ ಮತ್ತು ಕ್ರೀಡಾಭಿಮಾನಿಗಳ ಪರವಾಗಿ ಕೋಟಿ ಕೋಟಿ ಅಭಿನಂದನೆಗಳು ವಿಜೇತ ‘ಉತ್ತರ ಕನ್ನಡ ಸ್ಟಾಲಿಯನ್ಸ್’ ತಂಡದ ಎಲ್ಲಾ ಆಟಗಾರರಿಗೆ ನಮ್ಮ ಇಡೀ ಸಮಾಜ, ಸ್ನೇಹಿತರ ಬಳಗ ಹಾಗೂ ಮುಂಡಗೋಡು, ಯಲ್ಲಾಪುರ, ಹಳಿಯಾಳ ಸೇರಿದಂತೆ ಇಡೀ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರ ಮತ್ತು ಕ್ರೀಡಾಭಿಮಾನಿಗಳ ಪರವಾಗಿ ಕೋಟಿ ಕೋಟಿ ಅಭಿನಂದನೆಗಳು ಮತ್ತು ವಿಜಯೋತ್ಸವದ ಶುಭಾಶಯಗಳು ವ್ಯಕ್ತವಾಗಿವೆ.

ಗೆದ್ದು ಬಂದ ನಮ್ಮ ಸಿಂಹಗಳಿಗೆ ವಿಜಯದ ಹಾರ್ದಿಕ ಶುಭಾಶಯಗಳನ್ನು ಬಮ್ಮು ಪಟಕಾರೆ ಹಾಗೂ ವಿಠ್ಠು ಶೆಳಕೆ ಅವರ ಪ್ರೀತಿಯ ಸ್ನೇಹಿತರ ಬಳಗ ಮತ್ತು ಮುಂಡಗೋಡು – ಯಲ್ಲಾಪುರ – ಹಳಿಯಾಳ ಸೇರಿದಂತೆ ಇಡೀ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರು ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ