ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಕಾರವಾರ(Karwar) : ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ(Social Media) ತಪ್ಪಾದ ಹಾಗೂ ಸುಳ್ಳು ಮಾಹಿತಿಯನ್ನು(Fake Information) ಹರಿಬಿಟ್ಟು ಮೂಲ ಮುರುವಿನಕಟ್ಟೆಗೆ(Muruvinakatte) ಧಕ್ಕೆಯಾಗಿರುವ ರೀತಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ. ಕಾರಣ ಸಾರ್ವಜನಿಕರು ಇಂತಹ ಸುದ್ದಿಗಳನ್ನ ನಂಬಬಾರದಾಗಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ(DC K Lakshmipriya) ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಜಿಲ್ಲಾಧಿಕಾರಿ, ಭಟ್ಕಳ ನಗರದ(Bhatkal Town) ಮೂಲಕ ಹಾದುಹೋಗುವ ರಾ.ಹೆ-66 ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ಹಾಗೆ ಅಮ್ಮನವರ ಹೊರೆಯನ್ನಿಡುವ ಮುರುವಿನಕಟ್ಟೆಯನ್ನು NHAI ರವರಿಂದ ROW ವ್ಯಾಪ್ತಿಯಲ್ಲಿ ಲಭ್ಯ ಸರ್ಕಾರಿ ಜಮೀನಿನಲ್ಲಿ ಮೇ 24 ರಂದು ಕೆಂಪು ಕಲ್ಲಿನಿಂದ ಕಟ್ಟಲಾಗುತ್ತಿರುವ ಸಂರಚನೆಯನ್ನು ಯಾರೋ ಕಿಡಿಗೇಡಿಗಳು ನಾಶಪಡಿಸಿದ್ದು. ಸದರಿಯವರ ಮೇಲೆ ಎಲ್ಲ ರೀತಿಯ ಕಾನೂನು ಕ್ರಮ(Legal Action) ಜರುಗಿಸಲಾಗುತ್ತಿದೆ ಎಂಬುದಾಗಿ ಈಗಾಗಲೇ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಮುಂದುವರೆದು ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆಯನ್ನಿಡಲಾಗುತ್ತಿರುವ ಮೂಲ ಕಟ್ಟೆಯಿರುವ ಮುರುವಿನಕಟ್ಟೆ ಸ್ಥಳವು ಯಥಾಸ್ಥಿತಿಯಲ್ಲಿರುವ ಬಗ್ಗೆಯೂ ಸಹ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆಯನ್ನಿಡುವ ಮೂಲ ಸ್ಥಳ ಮುರುವಿನಕಟ್ಟೆಯು ಯಥಾಸ್ಥಿತಿಯಲ್ಲಿರುತ್ತದೆ ಎಂಬುದಾಗಿ ಮತ್ತೊಮ್ಮೆ ಸ್ಪಷ್ಟಿಕರಣ ನೀಡಲಾಗಿದೆ. ಮುಂದುವರೆದು ಯಾರಾದರೂ ಇಂತಹ ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಸೂಚನೆ ನೀಡಿದ್ದಾರೆ.
ಇದನ್ನು ಓದಿ : ಮೇ 29ರ ವರೆಗೆ ಭಟ್ಕಳದಲ್ಲಿ ಮದ್ಯ ನಿಷೇಧ. ಜಿಲ್ಲಾಧಿಕಾರಿ ಆದೇಶ.
ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ವ್ಯಕ್ತಿ ನಾಪತ್ತೆ. ತಂದೆಯಿಂದ ದೂರು ದಾಖಲು.
