ದಾಂಡೇಲಿ(Dandeli) : ಇಂದು ನಸುಕಿನ ಜಾವದಲ್ಲಿ ನಗರದ ಸಂಡೇ ಮಾರ್ಕೆಟ್ (Sunday Market) ಹತ್ತಿರ ನಾಲ್ಕು ಅಂಗಡಿಗಳ ಸರಣಿ ಕಳ್ಳತನವಾದ(Serial theft) ಘಟನೆ  ನಡೆದಿದೆ.

ಸಂಡೆ ಮಾರ್ಕೆಟ್ ಹತ್ತಿರದ ಎಸ್ ಕೆ ಏಜೆನ್ಸಿ, ಚೌಗುಲಾ ಚಿಕನ್ ಸೆಂಟರ್, ಕರ್ನಾಟಕ ಎಗ್ ಸೆಂಟರ್(Egg Center) ಮತ್ತು ಇಂಡಿಯನ್ ಚಿಕನ್ ಸೆಂಟರಿಗೆ(Indian Chicken Center) ಕಳ್ಳರು ನುಗ್ಗಿದ್ದಾರೆ. ಕರ್ನಾಟಕ ಎಗ್ ಸೆಂಟರ್ ನಿಂದ ಸುಮಾರು 12 ಸಾವಿರ ರೂ. ನಗದು, ಇಂಡಿಯನ್ ಚಿಕನ್ ಸೆಂಟರ್ ನಿಂದ ಏಳು ಸಾವಿರ ರೂ ಕಳವು ಮಾಡಿರುವ ಮಾಹಿತಿ ಪ್ರಾಥಮಿಕವಾಗಿ ಲಭಿಸಿದೆ. ಈ ಸಂದರ್ಭದಲ್ಲಿ ಚೌಗುಲಾ ಚಿಕನ್ ಸೆಂಟರ್ ನ ಸಿಸಿ ಕ್ಯಾಮೆರಾವನ್ನು(CC Camer) ಕಳ್ಳರು ಮುರಿದು ಹಾಕಿರುವುದು ಗೊತ್ತಾಗಿದೆ.

ಉಳಿದ ಅಂಗಡಿಗಳಿಂದ ಕಳವಾಗಿರುವ ಬಗ್ಗೆ ನಿಖರ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ.  ಕೆಲ ದಿನಗಳ ಹಿಂದೆ ನಗರದಲ್ಲಿ ಸರಣಿ ಕಳ್ಳತನ ನಡೆದಿತ್ತು. ಆರೋಪಿಗಳನ್ನ ಪೊಲೀಸರು ಪತ್ತೆ ಮಾಡಿದ್ದರು. ಸ್ಥಳಕ್ಕೆ ದಾಂಡೇಲಿ ನಗರ ಠಾಣೆಯ ಪೊಲೀಸರು(Dandeli Town Police) ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿ ಬಂಧನ

ಜಮೀನಿಗೆ ಪರಿಹಾರ ನೀಡಲು ವಿಳಂಭ. ಕಚೇರಿ ಜಪ್ತಿ

ಮೂವರು ಮಕ್ಕಳನ್ನ ನದಿಗೆ ದೂಡಿ ವ್ಯಕ್ತಿ ಆತ್ಮಹತ್ಯೆ

ಹೆಜ್ಜೇನು ದಾಳಿ.