ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) :ಮಹಾಕುಂಭಮೇಳದಲ್ಲಿ ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆದ ಮೊನಾಲಿಸಾ ಈಗ ಬರೋಬ್ಬರಿ ಕಮಾಯಿಯಲ್ಲಿದ್ದಾಳೆ. ಹೊಟ್ಟೆಪಾಡಿಗಾಗಿ ರುದ್ರಾಕ್ಷಿ ಮಾಲೆ ಮಾರೋಕೆ ಕಷ್ಟ ಪಡುತ್ತಿದ್ದ ಈಕೆ ಈಗ ಭರ್ಜರಿ ಹಣ ಗಳಿಸುತ್ತಿದ್ದಾಳೆ.
ನೀಲಿ ಕಂಗಳ ಯುವತಿ ಮೊನಾಲಿಸಾ ಜೊತೆ ಸೆಲ್ಪಿಗಾಗಿ ಮುಗಿಬೀಳುವ ಪಡ್ಡೆ ಹುಡುಗರು, ಸಂದರ್ಶನಕ್ಕೆ ಬರುವ ಮಿಡಿಯಾದವರ ಕಿರಿಕಿರಿಯಿಂದ ತಂದೆ ಮಗಳು ಮೊನಾಲಿಸಾಳನ್ನ ಮಹಾಕುಂಭಮೇಳದ ಮಧ್ಯದಲ್ಲೇ ಊರಿಗೆ ಕಳುಹಿಸಿಬಿಟ್ಟಿದ್ದರು.
ಮಧ್ಯ ಪ್ರದೇಶದ ಇಂದೋರ್ನ ಮಹೇಶ್ವರ ಅನ್ನೋ ಪುಟ್ಟ ಗ್ರಾಮದ ಹುಡುಗಿ ಮೊನಾಲಿಸಾ. ಸದ್ಯ, ತನ್ನ ಅಜ್ಜನೊಂದಿಗೆ ಊರಿನಲ್ಲೇ ಇದ್ದಾಳೆ. ಮೊನಾಲಿಸಾಳ ಡಿಜಿಟಲ್ ಕ್ರೇಜ್ ಹೆಚ್ಚಾಗಿ ಆಕೆಯನ್ನ ಸುಮ್ಮನೆ ಕೂರಿಸುತ್ತಿಲ್ಲ. ತನ್ನನ್ನು ಅಪ್ಪ ಕುಂಭಮೇಳದಿಂದ ಕಳುಹಿಸಿದ್ದು ಏಕೆ ಅನ್ನೋ ಸಂಗತಿಯನ್ನೂ ಮೊನಾಲಿಸಾ ಹಂಚಿಕೊಂಡಿದ್ದಾಳೆ.
ಅಷ್ಟೇ ಅಲ್ಲ, ತನ್ನ ಪುಟ್ಟ ಮನೆ ತೋರಿಸಿ ತನ್ನ ಸ್ಥಿತಿ ಎಂಥದ್ದು ಅನ್ನೋದನ್ನ ಮುಗ್ಧವಾಗಿ ನಗುತ್ತಲೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಹೀಗಾಗಿ ಮಹಾಕುಂಭಮೇಳದಲ್ಲಿ ದಿನಕ್ಕೆ ₹1000 ದಿಂದ ₹3000 ದುಡಿಯುತ್ತಿದಾಕೆಯ ರೇಂಜ್ ಬದಲಾಗಿದೆ.
ಹೊಸ ಬ್ಯುಸಿನೆಸ್ ಆರಂಬಿಸಿರೋ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. ಮೊನಾಲಿಸಾ ಭೋಂಸ್ಥೆ 08 ಅನ್ನೋ ಯುಟ್ಯೂಬ್ ಚಾನಲ್ ಆರಂಭಿಸಿದ್ದಾಳೆ. ಇವಳ ಅದೃಷ್ಟವೋ? ಸುಂದರ ಕಣ್ಣಿನ ಆಕರ್ಷಣೆಯೋ? ಈಕೆಯ ಪ್ರತಿ ವಿಡಿಯೋ ಮಿಲಿಯನ್ ವೀವ್ಸ್ ಪಡೆಯುತ್ತಿವೆ. ಇದುವರೆಗೂ ಕೇವಲ ಒಂಬತ್ತು ವಿಡಿಯೋ ಬ್ಲಾಗ್ ಮಾಡಿರೋ ಮೊನಾಲಿಸಾ ಎಂಟೆ ದಿನಗಳಲ್ಲಿ ಸುಮಾರು 3 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿದ್ದಾಳೆ. ಸೋಷಿಯಲ್ ಬ್ಲಡ್ ಅನ್ನೋ ವೆಬ್ಸೈಟ್ ಈಕೆಯ ಯುಟ್ಯೂಬ್ ವಿಡಿಯೋ ಆದಾಯ ತಿಂಗಳಿಗೆ ₹10 ಲಕ್ಷ ದಾಟಲಿದೆ ಎಂದು ಅಂದಾಜಿಸುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಮೊನಾಲಿಸಾ ಸಖತ್ ಮಿಂಚುತ್ತಿದ್ದಾಳೆ. ಸದ್ಯ ಆಕೆಯ ಲಕ್ ಚೆನ್ನಾಗಿದೆ. ಇದು ಎಷ್ಟು ದಿನಕ್ಕೆ ಇರುತ್ತೋ ಗೊತ್ತಿಲ್ಲ.
ಇದನ್ನು ಓದಿ : ಹುಲಿ ಮೂತ್ರಕ್ಕೆ ಬೇಡಿಕೆ. ಮೃಗಾಲಯದಲ್ಲಿ ತಯಾರಾಯ್ತು ಔಷಧ.
ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ. ಒಂಬತ್ತು ಭಾರತೀಯರ ದುರ್ಮರಣ.
ಶಿರಸಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ. ಆತಂಕಗೊಂಡು ಓಡಿದ ನಾಗರಿಕರು.
ಕುಂಭಮೇಳದಲ್ಲಿ ಇಂದು 10ಕೋಟಿ ಭಕ್ತರ ಸಂಗಮ. ಪ್ರಧಾನಿ ಮೋದಿ ಪ್ರತಿಕ್ರಿಯೆ.
ಪ್ರತಿಷ್ಟಿತ ಬ್ಯಾಂಕ್ ಬುಡಕ್ಕೆ ಕೈ ಹಾಕಿದ ಸೈಬರ್ ಕಳ್ಳರು. ಅಕೌಂಟ್ ಹ್ಯಾಕ್.