ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುರ್ಡೇಶ್ವರ (Murdeshwar): ಭಟ್ಕಳದ ರಂಜನ್ ಇಂಡಿಯನ್ ಗ್ಯಾಸ್ ಏಜೆನ್ಸಿಯು ಸತತ 15 ವರ್ಷದಿಂದ ಶಿವರಾತ್ರಿಯಂದು ಭಟ್ಕಳದಿಂದ ಮುರ್ಡೇಶ್ವರಕ್ಕೆ(Bhatkal to Murdeshwar) ಯಶಸ್ವಿಯಾಗಿ ಪಾದಯಾತ್ರೆ(Padayatre) ಆಯೋಜಿಸಿಕೊಂಡು ಬರುತ್ತಿದೆ.
ಶಿವರಾತ್ರಿ(Shivaratri) ದಿನದಂದು ಸಾವಿರಾರು ಸಂಖ್ಯೆಯ ಶಿವಭಕ್ತರು ಭಟ್ಕಳದ ಚೋಳೇಶ್ವರ ದೇವಸ್ಥಾನದಿಂದ (Choleshwar Temple) ವಿಶ್ವಪ್ರಸಿದ್ದ (World Famous) ಮುರ್ಡೇಶ್ವರದ ಶಿವ ದೇಗುಲದವರೆಗೆ ಬರಿಗಾಲಿನಲ್ಲಿ ಸುಮಾರು 18 ಕಿಲೋ ಮೀಟರ್ ದೂರ ಭಕ್ತಿಪೂರ್ವಕವಾಗಿ ಪಾದಯಾತ್ರೆ ನಡೆಸಿ ದೇವರ ದರ್ಶನದೊಂದಿಗೆ ಆರ್ಶೀವಾದ ಪಡೆದುಕೊಂಡರು.
ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಪಟ್ಟಣದ ಚೋಳೇಶ್ವರ ದೇವಸ್ಥಾನಕ್ಕೆ ತೆರಳಿ ಶಿವ ದೇವರ ದರ್ಶನ ಪಡೆದು ಪಾದಯಾತ್ರೆ ಆರಂಭಿಸಿ ಅಲ್ಲಿಂದ ಚೆನ್ನಪಟ್ಟಣ ಹನುಮಂತ ದೇವಸ್ಥಾನ, ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ, ಹೆದ್ದಾರಿ-66ರ ಮಾರ್ಗವಾಗಿ ವೆಂಕಟಾಪುರ, ಶಿರಾಲಿ, ಸಾರದಹೊಳೆ ಮೂಲಕ ಮುರ್ಡೇಶ್ವರ ದೇವಸ್ಥಾನಕ್ಕೆ ತಲುಪಿದರು. ಮುರ್ಡೇಶ್ವರದವರೆಗೆ ಕೂಡ ಮಾರ್ಗಮಧ್ಯದಿಂದಲೂ ಭಕ್ತರು ಪಾದಯಾತ್ರೆಯಲ್ಲಿ ಸೇರಿಕೊಂಡು ಭಕ್ತಿ ಪ್ರದರ್ಶಿಸಿದರು.
ಪಾದಯಾತ್ರೆ ಮಾಡುವ ಶಿವಭಕ್ತರಿಗೆ ದಾರಿಯುದ್ದಕ್ಕೂ ಕುಡಿಯಲು ನೀರು, ಹಣ್ಣು ಪಾನೀಯ, ಹಣ್ಣಿನ ಜ್ಯೂಸ್ ಒದಗಿಸಲಾಯಿತು. ಕ್ರೀಯಾಶೀಲ ಗೆಳೆಯರ ಬಳಗ ದವರಿದಂದ ಮಹಾಶಿವರಾತ್ರಿಯ ಪ್ರಯುಕ್ತ ಪಾದಯಾತ್ರೆಗೆ ತೆರಳುವ ಭಕ್ತರಿಗೆ ಕಾಯ್ಕಿಣಿಯ ಬಸ್ತಿಯಲ್ಲಿ ನಿಂಬು ಪಾನೀಯ ಹಾಗೂ ಹಣ್ಣುವಿತರಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪಾದಯಾತ್ರೆ ಆಯೋಜಕರಿಂದ ಆಂಬ್ಯುಲೆನ್ಸ್ ಕಲ್ಪಿಸಲಾಗಿತ್ತು. ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ಮುರ್ಡೇಶ್ವರದಲ್ಲಿ ನೇರವಾಗಿ ಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಲಘು ಉಪಹಾರ ಸೇವಿಸಿ ಭಟ್ಕಳಕ್ಕೆ ವಾಪಸ್ಸಾಗಲು ಬಸ್ ವ್ಯವಸ್ಥೆ ಮಾಡಲಾಗಿತ್ತು.
ಇದನ್ನು ಓದಿ : ಮೀನುಗಾರರ ಮೇಲಾಗುತ್ತಿರುವ ದೌರ್ಜನ್ಯ ನಿಲ್ಲಲಿ. ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಹೇಳಿಕೆ
ಲೋಕಾಯುಕ್ತ ಬಲೆಗೆ ಬಿದ್ದ ಎಪಿಪಿ. ಮುದ್ದೆಮಾಲಿಗೆ ಬೇಡಿಕೆ.
ಗೋಕರ್ಣ ಸನ್ನಿಧಿಯಲ್ಲಿ ಪಿಎಸ್ಐ ಸಂಸ್ಕಾರ ಅನಾವರಣ. ಭಕ್ತರ ಮುಂದೆ ಎಎಸ್ಐ ಗೆ ಹೊಡೆಯಲು ಏನು ಕಾರಣ.