ಭಟ್ಕಳ(BHATKAL) : ಕಳೆದ ಐದು ದಿನಗಳಿಂದ ತಾಲೂಕಿನ ಮುಂಡಳ್ಳಿಯಲ್ಲಿ ಪ್ರತಿಷ್ಟಾಪಿಸಿದ ಗಣೇಶ ಮೂರ್ತಿಯನ್ನು ನೂರಾರು ನಾಗರಿಕರ ಉಪಸ್ಥಿತಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಮುಂಡಳ್ಳಿಯ ಸರ್ಕಾರಿ ಶಾಲಾ(MUNDALLI GOVT SCHOOL) ಆವರಣದಲ್ಲಿ ಕಳೆದ 40 ವರ್ಷಗಳಿಂದ ಗ್ರಾಮದ ಹಿರಿಯರ ಉಪಸ್ಥಿತಿಯಲ್ಲಿ ಗಣೇಶನ ಹಬ್ಬ ಆಚರಿಸುತ್ತಾ ಬರಲಾಗಿದೆ. ಇಲ್ಲಿ ಎಲ್ಲಾ ಸಮಾಜದ ನಾಗರಿಕರು ಒಟ್ಟಾಗಿ ನಾಲ್ಕು ದಶಕಗಳಿಂದ ಉತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ. ಅಲ್ಲದೇ ಹಬ್ಬದ ನಾಲ್ಕನೇ ದಿನ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯುತ್ತದೆ. ಭಟ್ಕಳ ತಾಲೂಕಿನ ಸಾವಿರಾರು ಸಂಖ್ಯೆಯ ನಾಗರಿಕರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಕೊನೆಯ ದಿನ ಫಲಾವಳಿ ಎಲಂ ಮುಗಿದ ನಂತರ ಬೃಹತ್ ಮೆರವಣಿಗೆ ಮೂಲಕ ಮೊಗೇರಕೇರಿ (MOGERKERI) ಸಮೀಪದ ಕಡಲತೀರಕ್ಕೆ ಮೂರ್ತಿಯನ್ನ ಕೊಂಡೋಯ್ಯಲಾಗುತ್ತದೆ. ಮಹಿಳೆಯರು, ಪುರುಷರು ಸೇರಿ ಬಾರೀ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರ ಸಹಾಯದಿಂದ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು. ಈ ವೇಳೆ ಗಜಾನನ ಮಹಾರಾಜ್ ಕೀ ಘೋಷಣೆ ಮೊಳಗುತ್ತದೆ. ಈ ವರ್ಷವೂ ಅತಿ ವಿಜೃಂಭಣೆಯಿಂದ ಕಾರ್ಯಕ್ರಮ ಸಂಪನ್ನಗೊಂಡಿತು.
ಇದನ್ನು ಓದಿ : ಇನ್ಮುಂದೆ ನೌಕಾಪಡೆಯಲ್ಲಿ ರಾರಾಜಲಿಸಲಿದೆ ಕರಾವಳಿಯ ಈ ಊರಿನ ಹೆಸರು
ಶಿರಸಿಯ ಗಣೇಶೋತ್ಸವ ಸ್ಥಳಗಳಲ್ಲಿ ಬಾಂಬ್ ಸ್ಕಾಡ್