ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಶಿರಸಿ(Sirsi) : ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ (Life imprisonment) ವಿಧಿಸಿದ ಘಟನೆ ವರದಿಯಾಗಿದೆ.

ಉತ್ತರಕನ್ನಡ(Uttarakannada) ಜಿಲ್ಲೆಯ ಹಳಿಯಾಳ ತಾಲೂಕಿನ(Haliyal Taluku) ಬಿದೊಳ್ಳಿ ಗ್ರಾಮದಲ್ಲಿ 2019ರ ಸೆಪ್ಟೆಂಬರ್ 3ರಂದು ಕೊಲೆ ಘಟನೆಯೊಂದು ನಡೆದಿತ್ತು. ಕುಟುಂಬದ ಕೇಶವ ಎಂಬಾತ ತನ್ನ ತಂದೆಯ ಆಸ್ತಿಯಲ್ಲಿ ತನ್ನ ಹಕ್ಕಿನ ಪಾಲು ಕೇಳಿದ್ದ. ಇದೇ ಕಾರಣದಿಂದ ಕೊಲೆ ಸಂಚು ರೂಪಿಸಲಾಗಿದೆ ಎಂದು ತನಿಖೆಯಿಂದ ಬಹಿರಂಗವಾಗಿತ್ತು.

ಅಕ್ಷಯ ಯಾನೆ ಆಕಾಶ ಕಿತ್ತೂರಕರ್, ಪಾಂಡುರಂಗ ಕಿತ್ತೂರಕರ್ ಹಾಗೂ ಲತಾ ಯಾನೆ ತುಳುಸಾಯಿ ಕಿತ್ತೂರಕರ್ ಅವರು ಸೇರಿ, ಕೇಶವನನ್ನು ಪ್ಲಾಸ್ಟಿಕ್ ಹಗ್ಗದಿಂದ ಹಲ್ಲೆ ಮಾಡಿ, ಬಳಿಕ ಕಂಬಕ್ಕೆ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪ್ರಕರಣದಿಂದ  ಸಾಬೀತಾಗಿದೆ. ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹದ ಮೇಲಿದ್ದ ರಕ್ತದ ಬಟ್ಟೆಗಳನ್ನು ಬದಲಾಯಿಸುವ ಮೂಲಕ ಅಪರಾಧವನ್ನು(Criminal) ಮರೆಮಾಚಲು ಯತ್ನಿಸಿರುವುದು ಗೊತ್ತಾಗಿತ್ತು.

ಪ್ರಕರಣ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ(Haliyal Police Station) ಭಾರತೀಯ ದಂಡ ಸಂಹಿತೆಯ ಕಲಂ 302 ಹಾಗೂ 201 ಸಹವಾಚಕ 34ರಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಗಳ ಪರಿಶ್ರಮ ಮತ್ತು ಸಮಗ್ರ ಸಾಕ್ಷ್ಯ ಸಂಗ್ರಹದ ಪರಿಣಾಮವಾಗಿ ಪ್ರಕರಣದಲ್ಲಿ ಶಿಕ್ಷೆ ನೀಡಲಾಗಿದೆ.

ಶಿರಸಿ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(Sirsi Court) (ಕಾರವಾರ, ಯಲ್ಲಾಪುರ ಪೀಠ)ದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಅಭಿಯೋಜನೆ ಮಂಡಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಮೂವರು ಆರೋಪಿತರಿಗೆ ಜೀವಾವಧಿ ಶಿಕ್ಷೆ (Life imprisonment) ಹಾಗೂ ತಲಾ ₹25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸಾಕ್ಷ್ಯ ಕೊರತೆಯಿಂದ ಗಣಪತಿ ಕಿತ್ತೂರಕರ್ ಮತ್ತು ಲಕ್ಷ್ಮಣ ಕಿತ್ತೂರಕರ್ ಅವರನ್ನು ಬಿಡುಗಡೆ ಮಾಡಲಾಗಿದೆ.

ಸರಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕರಾದ ರಾಜೇಶ ಎಂ. ಮಳಗಿಕರ್ ಅವರು ವಾದ ಮಂಡಿಸಿದ್ದು, ಪ್ರಕರಣದ ತೀರ್ಪು ಬರಲು ಪ್ರಮುಖ ಪಾತ್ರವಹಿಸಿದರು. ವಿಚಾರಣೆ ವೇಳೆ ಪೊಲೀಸ್ ಸಿಬ್ಬಂದಿಗಳು ತನಿಖೆಯನ್ನ ಸಮಗ್ರವಾಗಿ ನಿಭಾಯಿಸಿದ್ದರು.

ಇದನ್ನು ಓದಿ : ಪಿಯುಸಿಯಲ್ಲಿ ಭಟ್ಕಳ ವಿದ್ಯಾರ್ಥಿನಿಯ ಭರ್ಜರಿ ಸಾಧನೆ. ಶೇ 99% ಅಂಕ ಪಡೆದ ಮೈಮುನ್ ಅಜೈಬ್

ಪಿಯುಸಿಯಲ್ಲಿ ರಾಜ್ಯಕ್ಕೆ ದಿಶಾ ಫಸ್ಟ್. ಅಭಿನಂದನೆಗಳ ಸುರಿಮಳೆ.

ಮತ್ತೆಮತ್ತೆ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದ ಮುರ್ಡೇಶ್ವರದ ಐವರು‌ ರೌಡಿಗಳ ಗಡಿಪಾರು.