ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ರಾಷ್ಟ್ರೀಯಹೆದ್ದಾರಿ(National Highway) ಅಂಕೋಲಾ-ಯಲ್ಲಾಪುರ ಹೆದ್ದಾರಿಯ(Ankola-Yallapur Highway) ಗುಳ್ಳಾಪುರ ಬಳಿ ಇಕೋ ಕಾರು ಹಾಗೂ ಡಂಪರ್ ಲಾರಿ(Car-Dumper Lorry) ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದಾನೆ.
ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಾನಂದ ಅಂಬಿಗ ಮೃತ ದುರ್ದೈವಿಯಾಗಿದ್ದು ಗುಳ್ಳಾಪುರ ನಿವಾಸಿ ಎಂದು ಹೇಳಲಾಗಿದೆ.
ಗೋಕಾಕ್ನಿಂದ ಎಂ-ಸ್ಯಾಂಡ್ ತುಂಬಿಕೊಂಡು ಅತಿವೇಗವಾಗಿ ಬರುತ್ತಿದ್ದ ಲಾರಿ, ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದುರಂತ ಸಂಭವಿಸಿದೆ. ಮೃತ ಶಿವಾನಂದ ತಮ್ಮ ಪತ್ನಿ, ಮಗ ಹಾಗೂ ಓರ್ವ ಸಂಬಂಧಿಯೊಂದಿಗೆ ಮಾರುತಿ ಇಕೋ ಕಾರಿನಲ್ಲಿ(Maruti Echo Car) ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅಂತ್ಯಸಂಸ್ಕಾರ ಮುಗಿಸಿ ಮರಳಿ ಊರಿಗೆ ಬರುವಾಗ ಈ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಡಂಪರ್ ಟ್ರಕ್ ಕೂಡ ಹೆದ್ದಾರಿಯಲ್ಲೇ ಪಲ್ಟಿಯಾಗಿ ಬಿದ್ದಿದೆ. ಟ್ರಕ್ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಪರಾರಿಯಾದ ಲಾರಿ ಚಾಲಕನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿ : ಐಪಿಎಲ್ ಬೆಟ್ಟಿಂಗ್ ದಂಧೆ. ಪೊಲೀಸರಿಂದ ಹಲವರ ಬಂಧನ.
ಅಸ್ನೋಟಿಕರ ಹೇಳಿದ್ದು ಸುಳ್ಳು. ಮುಂದಿನ ಚುನಾವಣೆಯಲ್ಲಿ ಕಾರವಾರಕ್ಕೆ ಬಿಜೆಪಿ ಟಿಕೇಟ್: ರೂಪಾಲಿ
