ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಬೆಂಗಳೂರು(Bangalore) : ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ  ಆಸ್ಪತ್ರೆಯ ಗೋಡೆ(Hospital Wall) ಕುಸಿದು, ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಬೀದಿ ವ್ಯಾಪಾರಿಗಳು(Street Venders) ಮೃತಪಟ್ಟ ಘಟನೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ(Shivajinagara Bowring Hospital) ಬಳಿ ಸಂಭವಿಸಿದೆ.

ಮಕ್ಕಳು(Childrens) ಸೇರಿದಂತೆ  ಒಟ್ಟು ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಇದ್ದಾರೆ. ಬುಧವಾರ ಸಂಜೆ ಐದು  ಗಂಟೆಯಿಂದ ಸತತ 1 ಗಂಟೆ ಕಾಲ ಎಡಬಿಡದೆ ಮಳೆ ಸುರಿದಿದೆ. ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆ ಜೋರಾಗುತ್ತಿದ್ದಂತೆ ಬೀದಿಬದಿ ವ್ಯಾಪಾರಿಗಳು, ಕಾಂಪೌಂಡ್ ಪಕ್ಕದಲ್ಲಿ ಆಶ್ರಯ ಪಡೆದಿದ್ದರು. ಮಳೆಯಿಂದ ರಕ್ಷಿಸಿಕೊಳ್ಳಲು ಮಕ್ಕಳು ಸೇರಿ  ಎಲ್ಲರು ಕಾಂಪೌಂಡ್ ಬದಿಗೆ ಓಡಿ ಬಂದಿದ್ದಾರೆ. ಆದರೆ ಬೃಹತ್ ಕಾಂಪೌಂಡ್​(Big Wall) ಕುಸಿದು ಬಿದ್ದು ಅವಘಡ ಸಂಭವಿಸಿದೆ.

ತಬೀನ್ ತಾಜ್ (47), ಮುಬಿನ್ ತಾಜ್(49), ಮಾಯ (51), ಸಾಜಿದ್ (20), ಅಜು (35), ಪ್ರೀತಿ (5), ಸಿಜಿ (47) ಮೃತ ದುರ್ದೈವಿಗಳು.

ಕಾಂಪೌಂಡ್ ಗೋಡೆ ಕುಸಿತ ಘಟನೆ ತನಿಖೆಗೆ  ಮುಖ್ಯಮಂತ್ರಿ(Chief Minister) ಆದೇಶಿಸಿದ್ದಾರೆ. ಗೋಡೆಯ ಸ್ಥಿತಿ ಶಿಥಿಲವಾಗಿತ್ತೇ ಅಥವಾ ಭದ್ರತಾ ದೃಷ್ಟಿಯಿಂದ ಸರಿಯಾಗಿತ್ತೇ ಎಂದು ಪರಿಶೀಲಿಸಬೇಕಿತ್ತು. ಈ ಕುರಿತು ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಪ್ರಶ್ನಿಸಲಾಗಿದೆ. ಗೋಡೆ ಶಿಥಿಲವಾಗಿದ್ದರೂ, ಅಲ್ಲಿ ಬೀದಿ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿದ್ದುದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಇಂಜಿನಿಯರ್‌ಗಳ ಯಾವುದೇ ತಪ್ಪಿತಸ್ಥತೆ ಕಂಡುಬಂದರೆ, ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ.

ಸುರಿದ ಭಾರಿ ಮಳೆಗೆ ಬೆಂಗಳೂರಿನಲ್ಲಡೆ ಸುಮಾರು 50ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಕೆಂಪೇಗೌಡ ರೈಲ್ವೆ ನಿಲ್ದಾಣದ(Kempegowda Railway Station) ಬಳಿ ಬೃಹತ್ ಮರ ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಹಲವು ಕಾರುಗಳು ಜಖಂ ಆಗಿದೆ ಎಂದು ತಿಳಿದು‌ಬಂದಿದೆ.

ಇದನ್ನು ಓದಿ : ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆ. ಕೋಟ್ಯಾಂತರ ರೂಪಾಯಿ ಪೀಕಿದ ವಂಚಕರು.