ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ದಕ್ಷಿಣ ಭಾರತದ ಅತ್ಯಂತ ಜಾಗೃತ ಸ್ಥಳ, ಶಕ್ತಿ ಪೀಠ ಪ್ರಸಿದ್ಧ  ಧಾರ್ಮಿಕ ಸ್ಥಳ ಉತ್ತರಕನ್ನಡ(Utta) ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದ(Sirsi Sri Marikamba Temple) ನೂತನ ಅಧ್ಯಕ್ಷರಾಗಿ ರವಿ ಬೆಳ್ಳಿಮನೆ ಆಯ್ಕೆಯಾಗಿದ್ದಾರೆ.

ಕಾರವಾರದ ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಇಂದು  ಜೂನ್ 22 ರಂದು ಹೊಸ ಧರ್ಮದರ್ಶಿಗಳು ಮಂಡಳಿ ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ಶಿರಸಿಯ ನೀಲೇಕಣಿಯವರಾದ(Sirsi Nilekani) ರವಿ ಬೆಳ್ಳಿಮನೆ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದಿದ್ದು,  16 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ(Indian Army) ಸೇವೆ ಸಲ್ಲಿಸಿದ ಮಾಜಿ ಸೈನಿಕರಾಗಿದ್ದಾರೆ. 2023ರಲ್ಲಿ ನ್ಯಾಯಾಂಗ ವಿಭಾಗದಲ್ಲಿ ಎಫ್ ಡಿಎ ಆಗಿ ಸೇರ್ಪಡೆಗೊಂಡು ನಂತರ ಬೆಂಚ್ ಶಿರಸ್ತೇದಾರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ  ಕೆಎಎಸ್ (KAS) ಪಾಸ್ ಆಗಿ, ನೇರವಾಗಿ ಖಜಾನಾಧಿಕಾರಿಯಾಗಿ ವೃತ್ತಿ ಆರಂಭಿಸಿ ಜುಲೈ 2023ರಲ್ಲಿ ಜಿಲ್ಲಾ ಖಜಾನಾಧಿಕಾರಿ ಹುದ್ದೆಯಿಂದ ನಿವೃತ್ತರಾಗಿದ್ದಾರೆ.

ದೇವಾಲಯದ ಉಪಾಧ್ಯಕ್ಷರಾಗಿ ಅಶೋಕ ಪವಾರ ಆಯ್ಕೆಯಾಗಿದ್ದು, ಸದಸ್ಯರಾಗಿ ಅರ್ಚನಾ ರಾಘವೇಂದ್ರ ಹೊನ್ನಾವರ, ಕೇಶವ ಹೆಗಡೆ ಯಡಳ್ಳಿ ಹಾಗೂ ವಿನಾಯಕ ಶೇಟ್ ಆಯ್ಕೆಯಾಗಿದ್ದಾರೆ

ಉಪಾಧ್ಯಕ್ಷರಾಗಿ ಅಶೋಕ ಸೋಮಸಿಂಗ್ ಪವಾರ್  ಆಯ್ಕೆಯಾಗಿದ್ದಾರೆ. ಮೂಲತಃ ಮುಂಡಗೋಡು(Naive Mundagod) ತಾಲೂಕಿನ ಕುಸೂರಿನವರಾದ ಅಶೋಕ ಅವರು, 1990ರಲ್ಲಿ ಕೆನರಾ ಡಿಸಿಸಿ (KDCC) ಬ್ಯಾಂಕ್‌ನಲ್ಲಿ ಕಿರಿಯ ಗುಮಾಸ್ತರಾಗಿ ವೃತ್ತಿ ಆರಂಭಿಸಿದರು. ಹಂತ ಹಂತವಾಗಿ ಸಹಾಯಕ ವ್ಯವಸ್ಥಾಪಕರಾಗಿ, ಸೂಪರ್‌ವೈಸರ್, ಶಾಖಾ ವ್ಯವಸ್ಥಾಪಕರಾಗಿ ಬಡ್ತಿ ಪಡೆದು, ಪ್ರಧಾನ ಕಚೇರಿಯಲ್ಲಿ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿ 2023ರಲ್ಲಿ ನಿವೃತ್ತರಾಗಿದ್ದಾರೆ. ಕೆಡಿಸಿಸಿ ನೌಕರರ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇನ್ನುಳಿದಂತೆ ವಿನಾಯಕ ಎಸ್. ಶೇಟ್ ನಿವೃತ್ತ ಇಂಜಿನಿಯರ್ ಆಗಿದ್ದು,  ಮೂಲತಃ ಇಸಳೂರಿನವರು. ಲೋಕೋಪಯೋಗಿ ಇಲಾಖೆಯ(PWD) ಕಾರವಾರ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿ, 2021ರಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಶಿರಸಿ ಮಿನಿ ವಿಧಾನಸೌಧ, ನ್ಯಾಯಾಲಯ ಕಟ್ಟಡ, ಜಿಲ್ಲಾ ತರಬೇತಿ ಕೇಂದ್ರ ಹಾಗೂ ಮುಂಡಗೋಡ ತಾಲೂಕಿನ ಸೇತುವೆಗಳ ನಿರ್ಮಾಣದಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಪ್ರಸ್ತುತ ಸುಪ್ರಸನ್ನನಗರದ ನಿವಾಸಿಯಾಗಿರುವ ಇವರು, ಅರುಣೋದಯ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.

  ಶ್ರೀಮತಿ ಅರ್ಚನಾ ರಾಘವೇಂದ್ರ ಹೊನ್ನಾವರ ಅವರು ಬಿ.ಎ, ಡಿಎಡ್,  ಎಂ.ಎ ಪದವೀಧರೆಯಾಗಿದ್ದು,  ಮಹಿಳೆಯರ ಸ್ವಾವಲಂಬಿ ಬದುಕಿಗೆ ಅಗತ್ಯ ತರಬೇತಿ ನೀಡುವ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಶಿರಸಿಯ ಸಮೃದ್ಧಿ ಮಹಿಳಾ ಮಂಡಳದ ಅಧ್ಯಕ್ಷರಾಗಿ, ಅಯ್ಯಪ್ಪ ಸೌಹಾರ್ದ ಸಹಕಾರಿಯ ನಿರ್ದೇಶಕಿಯಾಗಿ ಹಾಗೂ ಅಯ್ಯಪ್ಪ ಕಂಪ್ಯೂಟರ್ ಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿವೃತ್ತ ಸೈನಿಕರಾದ ಕೇಶವ ಜಿ. ಹೆಗಡೆ  ಶಿರಸಿ ತಾಲೂಕಿನ ಅಬ್ರಿಮನೆಯವರು.  ಮೆಕ್ಯಾನಿಕಲ್ ಡಿಪ್ಲೊಮಾ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ ಕೇಶವ  ಭಾರತೀಯ ನೌಕಾದಳದಲ್ಲಿ(Indian Navy) 15 ವರ್ಷಗಳ ಕಾಲ ಸೇವೆ ಸಲ್ಲಿಸಿ, 1993ರಲ್ಲಿ ಜ್ಯೂನಿಯರ್ ಕಮಿಷನ್ ಆಫೀಸರ್ ಆಗಿ ನಿವೃತ್ತರಾಗಿದ್ದಾರೆ. ಆ ಬಳಿಕ ಕುದುರೆಮುಖ ಕಬ್ಬಿಣ ಅದಿರು ಕಂಪನಿಯಲ್ಲಿ ಹೆಲಿಕಾಪ್ಟರ್ ನಿರ್ವಹಣೆ ಹಾಗೂ 2011ರಿಂದ ಎಚ್ಎಎಲ್ (HAL) ನಲ್ಲಿ ಸ್ಟ್ರಕ್ಚರಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ 2019ರಲ್ಲಿ ನಿವೃತ್ತರಾದರು. 2021ರಲ್ಲಿ ಯಡಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಜನಸೇವೆ ಮಾಡಿದ್ದಾರೆ.

ಶಿರಸಿ ಶ್ರೀ ಮಾರಿಕಾಂಬಾ ದೇವಾಲಯವು ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ನೂತನ ಆಡಳಿತ ಮಂಡಳಿಯ ಆಯ್ಕೆಗೆ ಭಕ್ತರಲ್ಲಿ ಸಂತಸ ವ್ಯಕ್ತವಾಗಿದೆ.

ಇದನ್ನು ಓದಿ : ಪಾಳು ಮನೆಯಲ್ಲಿ  ಬಾರೀ ಸ್ಫೋಟ. ಹಲವು ಮನೆಗಳಿಗೆ ಹಾನಿ. ಪೊಲೀಸರ ದೌಡು.