ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಹೋರಿಗಳ ನಡುವೆ ನಡೆದ ಕಾದಾಟದಲ್ಲಿ ಸಿಲುಕಿ ಅಮಾಯಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ(Karwar Taluku Mallapur Village) ನಡೆದಿದೆ.

ಮೃತರನ್ನು ಮಲ್ಲಾಪುರ(Mallapur) ಗ್ರಾಮದ ರಾಜೇಶ್ವರಿ (29) ಎಂದು ಗುರುತಿಸಲಾಗಿದೆ. ಮಲ್ಲಾಪುರ ಗ್ರಾಮದ ಸುಭದ್ರ ಹೋಟೆಲ್ ಬಳಿ ಈ ಘಟನೆ ನಡೆದಿದೆ.

ರಾಜೇಶ್ವರಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ, ರಸ್ತೆಯಲ್ಲಿ ಎರಡು ಹೋರಿಗಳು(Bulls) ಕಾದಾಡುತ್ತಿದ್ದವು. ಈ ವೇಳೆ ಹೋರಿಗಳು ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಬಲವಾದ ಹೊಡೆತಕ್ಕೆ ರಾಜೇಶ್ವರಿ ಕುಸಿದು ಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಜೇಶ್ವರಿ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಮಲ್ಲಾಪುರ ಪೊಲೀಸ್ ಠಾಣಾ(Mallapur Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.