- ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಕಾರವಾರ(Karwar): ಮೀನುಗಾರರ ಸಮುದಾಯದ ನಾಯಕ, ಮಾಜಿ ಕಾರವಾರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿವಂಗತ ಕೆ ಟಿ ತಾಂಡೇಲ ಅವರಿಗೆ ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರವಾರ ನಗರದ ವನಶ್ರೀ ಸಭಾಭವನದಲ್ಲಿ ಕುಟುಂಬದವರು ಮತ್ತು ಅಭಿಮಾನಿಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಗಣ್ಯರು ಉಪಸ್ಥಿತರಿದ್ದು ಸಂತಾಪ ಸೂಚಿಸಿದರು.
ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರು ಸಭೆಯಲ್ಲಿ ಮಾತನಾಡುತ್ತಾ , ಕೆ ಟಿ ತಾಂಡೇಲ ಅವರ ಕಾರ್ಯವನ್ನ ಶ್ಲಾಘಿಸಿದರು.
ಮಹಾರಾಷ್ಟ್ರದಿಂದ ಆಗಮಿಸಿದ್ದ ನ್ಯಾಶನಲ್ ಫಿಶರೀಸ್ ಪೋರಮ್ ನ ರಾಮಕೃಷ್ಣ ತಾಂಡೇಲ ಮಾತನಾಡಿ, ಕೆ ಟಿ ತಾಂಡೇಲ ಅವರು NFF ಸದಸ್ಯರಿದ್ದು ಮೀನುಗಾರರು ಮತ್ತು ಕರಾವಳಿ ಉಳಿವಿಗಾಗಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ದೇವರು ಮನುಷ್ಯನಿಗೆ ಜನ್ಮ ನೀಡ್ತಾನೆ, ತಂದೆತಾಯಿ ದೊಡ್ಡವರಾಗಿ ಮಾಡ್ತಾರೆ, ಸಮಾಜ ಸೇವೆಗಾಗಿ ತೊಡಗಿಸಿಕೊಂಡು ಒಳ್ಳೆ ಕೆಲಸ ಮಾಡಬೇಕು. ಹೋರಾಟ ಮನೋಭಾವದ ಕೆ ಟಿ ತಾಂಡೇಲ ಅವರ ಜೀವನ ಮಾದರಿ ಅನುಕರಣಿಯ ಎಂದರು. ಈ ಸಂದರ್ಭದಲ್ಲಿ ಅವರು ಶ್ರದ್ಧಾಂಜಲಿ ಅರ್ಪಿಸಿದರು.
ಬಿಜೆಪಿ ಮುಖಂಡ ರಾಜೇಂದ್ರ ನಾಯ್ಕ ಮಾತನಾಡಿ, ಕೆ ಟಿ ತಾಂಡೇಲ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದರು. ಅವರು ವ್ಯಕ್ತಿಯಲ್ಲ ದೊಡ್ಡ ಶಕ್ತಿಯಾಗಿದ್ದರು. ಎಲ್ಲಾ ಜಾತಿ ಸಮೂದಾಯದವರನ್ನ ಪ್ರೀತಿಯಿಂದ ಕಾಣುವವರಾಗಿದ್ದರು. ಎಂದರು.
ವಿಶ್ರಾಂತ ಪ್ರಾಚಾರ್ಯ ವಿನಾಯಕ ಗಂಗೊಳ್ಳಿ ಅವರು ಕೆ ಟಿ ತಾಂಡೇಲ ಅವರ ಆದರ್ಶಗಳನ್ನ ಕೊಂಡಾಡಿದರು. ಮಾಜಿ ನಗರಸಭೆ ಸದಸ್ಯ ಅಶೋಕ ಕುಡ್ತಲಕರ್, ವಕೀಲರಾದ ಗಂಗಾಧರ ಜಾಂಬಾವಳಿಕರ, ಚಂದ್ರಕಾಂತ ಕೊಚ್ರೆಕರ ಸೇರಿ ಹಲವರು ಮಾತನಾಡಿದರು.
ಸಭೆಯಲ್ಲಿ ಹರಿಕಂತ್ರ ಮಹಾಜನ ಸಂಘದ ಕಾರ್ಯದರ್ಶಿ ಟಿ ಬಿ ಹರಿಕಾಂತ, ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಪ್ರಶಾಂತ ತಾಂಡೇಲ, ನಿರ್ದೇಶಕರಾದ ಪ್ರಶಾಂತ ಹರಿಕಂತ್ರ, ರಾಜೇಶ ಮಾಜಾಳಿಕರ, ಸಂಜಯ್ ಬಲೆಗಾರ, ಹರಿಹರ ಹರಿಕಾಂತ, ರಾಜು ಹರಿಕಂತ್ರ, ನಜೀರ್ ಅಹಮದ್ ಶೇಖ್, ಮೀನುಗಾರ ಯುವ ಮುಖಂಡರಾದ ಸೂರಜ್ ಕುರುಮಕರ್, ವಿನಾಯಕ ಹರಿಕಂತ್ರ, ತೋಕು ಹರಿಕಂತ್ರ, ಮಂಜುನಾಥ ಮುದಗೇಕರ, ಶ್ರೀನಿವಾಸ ಅಂಬಿಗ, ರೋಹಿದಾಸ ಬಾನಾವಳಿಕರ, ಪರ್ಶಿಯನ್ ಹಾಗೂ ಫಿಶಿಂಗ್ ಬೋಟ್ ಯುನಿಯನ್ ಪದಾಧಿಕಾರಿಗಳು , ಸದಸ್ಯರು, ಸುಶೀಲ ಹರಿಕಂತ್ರ, ಮೀನು ಮಾರಾಟ ಮಹಿಳೆಯರು, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೆ ಟಿ ತಾಂಡೇಲ ಅವರ ಪತ್ನಿ ಸುಶೀಲಾ ತಾಂಡೇಲ, ಮಕ್ಕಳಾದ ವಿನೋದ, ವಿಕಾಸ ಹಾಗೂ ವೀಣಾ ಹಾಗೂ ಸೇರಿದಂತೆ ಬಂಧು ಮಿತ್ರರು, ಒಡನಾಡಿಗಳು ಆಗಮಿಸಿ ಪುಷ್ಪನಮನ ಸಲ್ಲಿಸಿದರು.