ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)  ಕಾರವಾರ(Karwar) : ಕೊಂಕಣ ಖಾರ್ವಿ ವಾಡಾ ಕಾಜುಭಾಗದ ನಿವಾಸಿ ಕೃಷ್ಣಾ ದೇವು ಬಾನಾವಳಿಕರ್ ಅವರು ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ಅವರಿಗೆ 82 ವರ್ಷ  ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ವಯೋಸಹಜ ಅನಾರೋಗ್ಯದಿಂದ ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಬ್ಬರು ಗಂಡು ಮಕ್ಕಳು ನಾಲ್ವರು ಪುತ್ರಿಯರನ್ನು ಅವರು ಅಗಲಿದ್ದಾರೆ. ಕೃಷ್ಣಾ ಅವರು  ಬಡವರ ಬಗ್ಗೆ ಕಾಳಜಿ ಹೊಂದಿ ಸದಾ ಸಮಾಜ ಸೇವೆಯಲ್ಲಿ ತೊಡಗಿದ್ದ ಈ ಹಿಂದೆ ಮೀನು ವ್ಯಾಪಾರ ಮಾಡುತ್ತಿದ್ದ  ದಿವಂಗತ ಮೀರಾ ಬಾನಾವಳಿ (ಬಂಗಾರ ಮೀರಾ)  ಅವರ ಪತಿಯಾಗಿದ್ದಾರೆ.

ಅವರ ಸಾವಿನಿಂದ ಸಮಾಜದ ಗಣ್ಯರು ಹಾಗೂ ಊರ ನಾಗರಿಕರು ಸಂತಾಪ ಸೂಚಿಸಿದ್ದಾರೆ.