ಭಟ್ಕಳ(Bhatkal) : ಸೋಮವಾರ ಬೆಳಿಗ್ಗೆ ಶಾಲೆಗೆ ತೆರಳಿದ್ದ ವಿದ್ಯಾರ್ಥಿಯೋರ್ವ ಸಂಜೆ ಮನೆಗೆ ಬಾರದೆ ಕಣ್ಮರೆಯಾದ ಘಟನೆ ನಡೆದಿದೆ.

ಭಟ್ಕಳ ತಾಲೂಕಿನ ಕಡವಿನಕಟ್ಟೆಯ (Kadavinakatte)ಅಮೋಘ ಈಶ್ವರ ನಾಯ್ಕ ನಾಪತ್ತೆಯಾದ ವಿದ್ಯಾರ್ಥಿ.  ಈತನು ಭಟ್ಕಳದ ಮುಂಡಳ್ಳಿ(Mundalli) ಗ್ರಾಮದ ಹೈಸ್ಕೂಲಿನ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಇಂದು ಬೆಳಿಗ್ಗೆ ಮನೆಯಿಂದ ಸಮವಸ್ತ್ರ ಧರಿಸಿ ಶಾಲೆಗೆ ಹೋಗಿದ್ದ.  ಸಂಜೆ ಮರಳಿ ಮನೆಗೆ ಬಂದಿಲ್ಲ. ಹೀಗಾಗಿ ಮನೆಯವರು ಹುಡುಕಾಟ ನಡೆಸಿದ್ದಾರೆ.

ದಯವಿಟ್ಟು ಯಾರಿಗಾದರೂ ಈ ಹುಡುಗ ಕಂಡುಬಂದರೆ ಈ 99029 96196, 9945925313, 9986685627 ಮೊಬೈಲ್ ನಂಬರನ್ನು ಸಂಪರ್ಕಿಸಿ ಕರೆ (call) ಮಾಡಲು ಕುಟುಂಬದವರು ವಿನಂತಿಸಿದ್ದಾರೆ.