ಕಾರವಾರ(KARWAR) : ಮಲಗಿದ್ದ ಕಾರ್ಮಿಕನ ಮೇಲೆ ವಾಹನವೊಂದು ಹಾಯ್ದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಬೈತಕೋಲ್ ಮೀನುಗಾರಿಕಾ ಬಂದರಿನಲ್ಲಿ (BAITKOL FISHING PORT)ನಡೆದಿದೆ.

ಹಾವೇರಿ ಮೂಲದ ಹನುಮಂತ್ ವಡ್ಡರ್ (27) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ರಾತ್ರಿ ಉತ್ತರಕರ್ನಾಟಕ ಭಾಗದ ನಾಲ್ಕೈದು ಕಾರ್ಮಿಕರು(LABOURS) ಬಂದರು ಪ್ರದೇಶದಲ್ಲಿ ಮಲಗಿದ್ದರು. ಮೀನು ತುಂಬಿಕೊಂಡ ಬೊಲೆರೋ ವಾಹನದ ಚಾಲಕ ಏಕಾಏಕಿಯಾಗಿ ವಾಹನ ಸ್ಟಾರ್ಟ್ ಮಾಡಿ  ಚಲಾಯಿಸಿದ್ದರಿಂದ ಹನುಮಂತ ಅವರ ತಲೆಯ ಮೇಲೆ ಚಕ್ರ ಹಾಯ್ದಿದ್ದರಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

ಇನ್ನೊಂದು ತಿಂಗಳಲ್ಲಿ ಕಾರ್ಮಿಕ ಹನುಮಂತ ಮದುವೆಗೆ ತಯಾರಿ ಮಾಡಿಕೊಂಡಿದ್ದ. ಇಂದು ಬೆಳಿಗ್ಗೆ ಈ ಸಂಬಂಧ ಊರಿಗೆ ಹೋಗುವವನಿದ್ದ. ಹಸೆಮಣೆ ಇರುವ ಮುನ್ನವೇ ಸಾವನ್ನಪ್ಪಿರುವುದು ಕುಟುಂಬದವರ ದುಃಖ ಹೆಚ್ಚಿಸಿದೆ.

ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ (KARWAR POLICE STATION) ಪ್ರಕರಣ ದಾಖಲಾಗಿದ್ದು ವಾಹನ ಚಾಲಕನನ್ನ  ಬಂಧಿಸಿದ್ದು ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ಬೆಂಗಳೂರಿಂದ ಕರಾವಳಿಗೆ ವಿಶೇಷ ರೈಲು

ನೇತ್ರಾಣಿಯಲ್ಲಿ ಸ್ಕ್ಯೂಬ್ಸ್ ಡೈವಿಂಗ್ ಮತ್ತೆ ಆರಂಭ

ದಾಂಡೇಲಿಯಿಂದ ಬೆಂಗಳೂರಿಗೆ ರೈಲು ಆರಂಭಿಸಲು ಮನವಿ

ICSE ಪಠ್ಯ ಪುಸ್ತಕದಲ್ಲಿ ಕವಿ ಶ್ರೀಧರ್ ಶೇಟ್ ಕವನ