ಮುರ್ಡೇಶ್ವರ(MURDESHWAR) : ಜಗತ್ತಿನ ಪ್ರವಾಸಿಗರನ್ನ ತನ್ನಡೆಗೆ ಸೆಳೆದಿರುವ ಮುರ್ಡೇಶ್ವರ ಈಗ ಮತ್ತೆ  ಕೈಬೀಸಿ ಕರೆಯುತ್ತಿದೆ.

ಅರಬ್ಬಿ ಸಮುದ್ರ(OCEAN SEA) ಮಧ್ಯೆ ಇರುವ ನೇತ್ರಾಣಿ ದ್ವೀಪದ (NETRANI ISLAND) ಸಮೀಪ ಸ್ಕ್ಯೂಬಾ ಡೈವಿಂಗ್(SCUBA DIVING) ಚಟುವಟಿಕೆ ಪುನಃ ಆರಂಭಗೊಂಡಿದೆ. ಕಳೆದ ಆರೇಳು ತಿಂಗಳಿಂದ ಸ್ಥಗಿತಗೊಂಡಿದ್ದ ಸ್ಕ್ಯೂಬಾ ಅಕ್ಟೋಬರ್ ಒಂದರಿಂದ ಮತ್ತೆ ತೆರೆದುಕೊಂಡಿದ್ದು ಪ್ರವಾಸಿಗರ ಕಾತುರತೆಗೆ ಕಾಲ ಕೂಡಿ ಬಂದಿದೆ.

ಉತ್ತರಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ(TOURISM DEPARTMENT) ಸ್ಕ್ಯೂಬಾ ಡೈವಿಂಗ್ ಗೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು ಸದ್ಯ ಓರ್ವ ಆಪರೇಟರ್ ಚಟುವಟಿಕೆ ನಡೆಸುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಇನ್ನೂ ಐವರು ಆಪರೇಟರ್ ಇದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ:
ಪ್ರವಾಸಿಗರ ಸುರಕ್ಷತೆ ಕಡೆ ಗಮನ ಹರಿಸಲಾಗಿದ್ದು ನಿಗದಿತ ಸಂಖ್ಯೆಯಲ್ಲಿ ಬೋಟ್ ಮೂಲಕ ನೇತ್ರಾಣಿಗೆ ಪ್ರವಾಸಿಗರನ್ನ ಕೊಂಡೋಯ್ಯಲಾಗುತ್ತದೆ. ಮಹಿಳಾ ಪ್ರವಾಸಿಗರಿಗೋಸ್ಕರ ಮಹಿಳಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಮುರ್ಡೇಶ್ವರ ಕಡಲ(MURDESHWAR SEA) ತೀರದಿಂದ ನೇತ್ರಾಣಿಗೆ ಹೋಗಿ ವಾಪಾಸ್ ಬರುವವರೆಗೆ ಸಂಬಂಧಪಟ್ಟವರು ಪ್ರವಾಸಿಗರ ಕಾಳಜಿ ವಹಿಸಲಾಗುತ್ತದೆ.

ಹವಳದ ಬಂಡೆಗಳು(CORAL ROCK ) ಮತ್ತು ಸಮುದ್ರ ಜೀವಿಗಳು ರಾಷ್ಟ್ರೀಯ (NATIONAL) ಸಂಪತ್ತುಗಳು. ಅವುಗಳನ್ನ ಸಂರಕ್ಷಿಸಬೇಕು.  ಸ್ಕ್ಯೂಬಾ ಡೈವ್ ಮೂಲಕ ಪ್ರವಾಸಿಗರು ನೀರಿನಾಳಕ್ಕೆ ತೆರಳಿ ಅದರ ಸೌಂದರ್ಯ ಸವಿಯಬಹುದು. ಮುರ್ಡೇಶ್ವರದಿಂದ ನೇತ್ರಾಣಿವರೆಗಿನ ಬೋಟ್ ಮೇಲಿನ ಪಯಣ ಪ್ರವಾಸಿಗರಿಗೆ ಇನ್ನಷ್ಟು ಖುಷಿ ನೀಡಲಿದೆ.

ನಿಮಗೆ ನೀರಿನಾಳಕ್ಕೆ ಇಳಿದು ಹೊಸ ಜಗತ್ತನ್ನ ನೋಡುವುದಾದರೆ ತಲೆ ಕೆಡಿಸಿಕೊಳ್ಳಬೇಡಿ. ಸ್ಕ್ಯೂಬಾ ಮಾರ್ಗದರ್ಶಿಗಳು ನೀಡುವ ಸಲಹೆ ಪಾಲಿಸಿದರೆ ಖಂಡಿತ ನೀವು ಸ್ಕ್ಯೂಬಾ ಡೈವಿಂಗ್ ಮಾಡಲಿದ್ದೀರಿ.

ದೂರದೂರದಿಂದ ಬರುವ ಪ್ರವಾಸಿಗರು ಮುಂಚಿತವಾಗಿ ಬುಕ್ ಮಾಡಿ ಸ್ಕ್ಯೂಬಾ ಡೈವಿಂಗ್ ಗೆ ಆಗಮಿಸಬಹುದು. ಜೊತೆಗೆ ಮುರ್ಡೇಶ್ವರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.

ಇದನ್ನು ಓದಿ : ದಾಂಡೇಲಿ ಬೆಂಗಳೂರು ರೈಲು ಪ್ರಾರಂಭಿಸಲು ಮನವಿ

ಐಸಿಎಸ್ಇ ಪಠ್ಯ ಪುಸ್ತಕದಲ್ಲಿ ಕವಿ ಶ್ರೀಧರ ಶೇಟ್ ಕವನ

ಎಂ ಜಿ ರಸ್ತೆಯಲ್ಲಿ ಕಸ ಸ್ವಚ್ಛಗೊಳಿಸಿದ ನ್ಯಾಯಧೀಶರು.