ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida): ತಾಲೂಕಿನ ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿಯ (Goa National Highway) ಅನ್ಮೋಡ ಬಳಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಆರ್.ಟಿ.ಓ ಚೆಕ್ ಪೋಸ್ಟ್ (RTO Check Post) ಸಮೀಪ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಅಥವಾ ಅಪರಿಚಿತ ವಾಹನ ಢಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಿಂಗರಗಾವ್ ಮಾಲುಂಬ ನಿವಾಸಿ ನಾಗೇಂದ್ರ ಗಾವಾಡೆ(26) ಮೃತ ದುರ್ದೈವಿಯಾಗಿದ್ದಾನೆ. ಬೆಳಿಗ್ಗೆ ಸಿಂಗರಗಾಂವನಿಂದ ಗೋವಾಕ್ಕೆ ಬೈಕ್ ಮೂಲಕ ನಾಗೇಂದ್ರ ತೆರಳುತಿದ್ದ. ಹೆದ್ದಾರಿಯಲ್ಲಿ ಮಂಜು ಹೆಚ್ಚಾಗಿದ್ದರಿಂದ ಈ ಅಪಘಾತ ಸಂಭವಿಸಿದೆ. ರಾಮನಗರ ಠಾಣಾ(Ramanagar Station) ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಟೈಲ್ಸ್ ಅಂಗಡಿ ಮಾಲಿಕನ ಮೇಲೆ ಗ್ರಾನೈಟ್ ಬಿದ್ದು ದುರ್ಮರಣ