ಹೊನ್ನಾವರ(Honnavar) : ಪಟ್ಟಣದ ರಾ. ಹೆದ್ದಾರಿ 66(NH-66) ಶರಾವತಿ ಸೇತುವೆ (Sharavati Bridge) ಮೇಲೆ ಮತ್ತೊಂದು ಭೀಕರ ಅಪಘಾತ(Horrible Accident) ಸಂಭವಿಸಿದೆ. ಕಾರು ಮತ್ತು ಬೈಕ್(Car and Bike) ನಡುವೆ ಸಂಭವಿಸಿದ ಅಪಘಾತದಲ್ಲಿ ಯುವತಿಯೊರ್ವಳು ಧಾರುಣ ಸಾವನ್ನಪ್ಪಿದ್ದಾಳೆ.
ಬೈಕ್ ಹಿಂಬದಿಯಲ್ಲಿ ಕುಳಿತ್ತಿದ್ದ ಯುವತಿ ಪೂಜಾ ಪ್ರಭಾಕರ ಗೌಡ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಈಕೆ ಹಳದಿಪುರ ಅಪ್ಪಿಕೇರಿಯ(Haladipur Appikeri) ನಿವಾಸಿ ಎಂದು ತಿಳಿದುಬಂದಿದೆ. ಬೈಕ್ ಸವಾರ ಸುರೇಶ ಗಣಪು ಗೌಡ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುರ್ಡೇಶ್ವರ ಕಡೆಯಿಂದ ಹೊನ್ನಾವರ ಕಡೆಗೆ(Murdeshwar to Honnavar) ಬೈಕ್ ನಲ್ಲಿ ಇಬ್ಬರು ಬರುತ್ತಿದ್ದರು. ಶರಾವತಿ ಸೇತುವೆ(Sharavati Bridge) ಮೇಲೆ ಎದುರಿಗೆ ಬರುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ , ಹಿಂಬದಿ ಕುಳಿತಿದ್ದ ಯುವತಿ ಪೂಜಾ ತಲೆಗೆ ಗಂಭೀರವಾಗಿ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಹೊನ್ನಾವರ ಪೊಲೀಸರು(Honnavar Police) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಮುರ್ಡೇಶ್ವರ ಮಹಾ ರಥೋತ್ಸವ ಸಂಪನ್ನ. ಭಕ್ತಿ-ಭಾವದಿಂದ ತೇರು ಎಳೆದ ಭಕ್ತರು
ಮಣಿ ಮಾರುವ ಹುಡುಗಿ ಕುಂಭಮೇಳದಲ್ಲಿ ಫೇಮಸ್. ಕಾಟ ತಾಳಲಾರದೆ ಸಂಕಷ್ಟ.
ಆಪತ್ಕಾಲದಲ್ಲಿ ನೆರವಿಗೆ ಬಾರದ 108 ಆಂಬುಲೆನ್ಸ್, ವ್ಯಕ್ತಿ ಸಾವು. ಮೃತದೇಹವಿಟ್ಟು ಪ್ರತಿಭಟನೆ.