ಕುಮಟಾ(KUMTA) : ಲಿಫ್ಟ್ ದುರಂತದಲ್ಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕುಮಟಾ ಪಟ್ಟಣದಲ್ಲಿ ಸಂಭವಿಸಿದೆ.
ಸುಭಾಸ್ ರಸ್ತೆಯಲ್ಲಿರುವ(SUBHAS ROAD) ಜಗದಂಬಾ ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನ(RAJASTHAN) ಮೂಲದ ಗೋಪ್‌ಸಿಂಗ್ (25) ಮೃತ ದುರ್ದೈವಿ. ಗೋಪ್ ಸಿಂಗ್ ಜಗದಂಬಾ ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಾಲ್ಕು ಅಂತಸ್ಥಿನ ಈ ಮಳಿಗೆಯಲ್ಲಿ ಭಾರವಾದ ಇಲಿಕ್ಟ್ರಿಕಲ್ ಸಾಮಗ್ರಿಗಳನ್ನು ಲಿಫ್ಟ್ ಮೂಲಕ ಮೇಲಿನ ಮಹಡಿಗೆ ಸಾಗಿಸುತ್ತಿರುವಾಗ ಲಿಫ್ಟ್ ಚೈನ್ ತುಂಡಾಗಿ ದುರಂತ ಸಂಭವಿಸಿದೆ.ಪರಿಣಾಮವಾಗಿ ಗೋಪಸಿಂಗ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಡಿವೈ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ (KUMTA POLICE STATION) ಪ್ರಕರಣ ದಾಖಲಾಗಿದೆ.
ಇದನ್ನು ಓದಿ :
ಗೋಕರ್ಣದಲ್ಲಿ ಪ್ರವಾಸಿಗರು ನೀರು ಪಾಲು
ಗಣೇಶೋತ್ಸವ ಸ್ಥಳಗಳಲ್ಲಿ ಬಾಂಬ್ ಸ್ಕಾಡ್