ಮುರ್ಡೇಶ್ವರ(MURDESHWAR) : ದೇಶದ ಇತಿಹಾಸ(HISTORY)ದಲ್ಲಿ ಮುರ್ಡೇಶ್ವರದ ಈಶ್ವರನಿಗೆ ಪ್ರಥಮ ಭಸ್ಮಾರ್ಚನೆ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಿಂದ ನಡೆಯಿತು.

ಮುರ್ಡೇಶ್ವರ ದೇವಾಲಯದ ಮ್ಯಾನೇಜಿಂಗ್  ಟ್ರಸ್ಟಿ ಸತೀಶ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಬುಧವಾರ ಈ ಒಂದು ಕಾರ್ಯಕ್ರಮ ನಡೆಸಲಾಗಿದೆ. ಸುಮಾರು ಒಂದು ಕ್ವಿಂಟಲ್ ಶುದ್ಧ ಗೋಮಯದಿಂದ ತಯಾರಿಸಿದ ಭಸ್ಮವನ್ನು ವಾದ್ಯಗಳ ಮೂಲಕ ಭಕ್ತರ ಸಮ್ಮುಖದಲ್ಲಿ ದೇವಾಲಯಕ್ಕೆ ತರಲಾಯಿತು.

ದೇವಾಲಯದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ  ಅರ್ಚಕ ವೃಂದದವರು ಮಂತ್ರ ಘೋಷದೊಂದಿಗೆ ಸುಮಾರು ನಾಲ್ಕು ತಾಸುಗಳ ಕಾಲ ಶಿವನಿಗೆ ಅರ್ಚನೆ ಮಾಡಿದರು. ಈಶ್ವರನ ಕಲ್ಯಾಣಕ್ಕಾಗಿ ಈ ಒಂದು ಭಸ್ಮಾರ್ಚನೆ  ನಡೆಯಿತು. ಇಷ್ಟು ವರ್ಷಗಳ ಕಾಲ  ತಮ್ಮನ್ನೆಲ್ಲ ಪೋಷಿಸಿದ ಶಿವ(SHIVA) ಪರಮಾತ್ಮನಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ.

ಮುರ್ಡೇಶ್ವರದ ಸಮಸ್ತ ಭಕ್ತ ವೃಂದ, ವಿವಿಧ ಸಮುದಾಯದ ಸಾವಿರಾರು ಸಂಖ್ಯೆಯ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. 1985 ರಲ್ಲಿ ಮುರ್ಡೇಶ್ವರದ ದೇವ ಈಶ್ವರನಿಗೆ ಅಷ್ಟಬಂಧ ನೆರವೇರಿಸಲಾಗಿತ್ತು. ಬಳಿಕ ಈ ಬಾರೀ ದೇಶದ ಮೊದಲ ಬಾರಿಗೆ ವಿಶಿಷ್ಟವಾಗಿರುವ ಭಸ್ಮಾರ್ಚನೆ ಮಾಡಲಾಗಿದೆ.

ಉತ್ತರಕನ್ನಡ(UTTARKANNADA) ಜಿಲ್ಲೆಯ ಭಟ್ಕಳ(BHATKAL) ತಾಲೂಕಿನಲ್ಲಿರುವ  ಮುರ್ಡೇಶ್ವರ  ದೇವಾಲಯ(MURDESHWAR TEMPLE) ಜಗತ್ತಿನ ಧಾರ್ಮಿಕ ಮತ್ತು ಐತಿಹಾಸಿಕ ಪುಣ್ಯ ಸ್ಥಳವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಕ್ಷೇತ್ರ ಜಗತ್ತಿನಲ್ಲಿ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. 

ಕಂದುಕಾಗಿರಿ ಶಿಖರದಲ್ಲಿ ನೆಲೆಸಿರುವ ಮುರ್ಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರ್ಡೇಶ್ವರದ ಪ್ರಮುಖ ಆಕರ್ಷಣೆ.  ಇಲ್ಲಿ 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ ಈ ದೇವಾಲಯದಲ್ಲಿ ನಾವು ಕಾಣಬಹುದು. ಮುರ್ಡೇಶ್ವರದಲ್ಲಿನ ಶಿವನ ದೈತ್ಯ ಪ್ರತಿಮೆಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬಿದ್ದು, ಸಾರ್ವಕಾಲಿಕವಾಗಿ ಪ್ರತಿಮೆಯು ಹೊಳೆಯುತ್ತಿರುವಂತೆ ನಿರ್ಮಿಸಲಾಗಿದೆ. ಹೀಗಾಗಿ ಶಿವನ ಪ್ರತಿಮೆ ವಿಶೇಷ ಆಕರ್ಷಣೆ ಹೊಂದಿದೆ.

ಉದ್ಯಮಿ ಆರ್.ಎನ್.ಶೆಟ್ಟಿ(R N SHETTY) ಮುರ್ಡೇಶ್ವರದ ನಿರ್ಮಾತೃ. ಮುರ್ಡೇಶ್ವರ ಕಳೆದ ನಾಲ್ಕು ದಶಕಗಳಿಂದ ಅಭಿವೃದ್ಧಿ ಕಾಣುತ್ತಾ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿದೆ.  ಇಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಸ್ಥಳೀಯ ಜನರ ಆದಾಯದ ಮಟ್ಟ ಕೂಡ ಜಾಸ್ತಿಯಾಗಿದೆ.

ಹೀಗಾಗಿ ಶಿವನ ಆರಾಧನೆ ಸ್ಥಳೀಯರಿಂದ ಹಿಡಿದು ಬಂದಂಥ ಪ್ರವಾಸಿಗರು ಮಾಡುತ್ತಾರೆ. ದೇವರ ಸೇವೆಯನ್ನು ನಿರಂತರವಾಗಿ ಭಕ್ತರು ಮಾಡುತ್ತಿರುವುದು ವಿಶೇಷ.

ಇದನ್ನು ಓದಿ : ಅರಬ್ಬೀ ಸಮುದ್ರದಲ್ಲಿ ತೂಪಾನ್