ಶಿರಸಿ(Sirsi): ಕಳೆದ ಒಂದು ವಾರದಿಂದ ಆನೆಗಳ(Elephants) ಹಿಂಡು ಹೊಲಗದ್ದೆಗಳಿಗೆ ದಾಳಿ(Attack) ಮಾಡಿ ಶಿರಸಿ ಮತ್ತು ಸಿದ್ದಾಪುರ (Sirsi and Siddapur) ರೈತರ ನಿದ್ದೆಗೆಡಿಸುತ್ತಿದೆ.
ದಾಂಡೇಲಿಯಿಂದ ಮಂಚಿಕೇರಿ(Dandeli to manchikeri), ಬಿಸಲಕೊಪ್ಪ ಮಾರ್ಗವಾಗಿ (Bisalakopp route) ಮಳಲಗಾಂವ ಅರಣ್ಯ (Malalagaum Forest) ಪ್ರದೇಶಕ್ಕೆ ಬಂದು ನಂತರ ಕಾನಸೂರ(Kanasuru), ಸುತ್ತ ಮುತ್ತಲಿನ ಗ್ರಾಮಗಳಿಗೆ ಬಂದು ರೈತರ (Farmers) ಬಾಳೆ ತೋಟಕ್ಕೆ ದಾಳಿ ಮಾಡಿವೆ. ಇದರಿಂದ ಕಾನಸೂರು ಭಾಗದ ಸುತ್ತ ಮುತ್ತಲಿನ ರೈತರ ಕಂಗಾಲಾಗುವಂತಾಗಿದೆ ಎಂದು ಗ್ರಾಮಸ್ಥರು(Villagers) ಅರಣ್ಯ ಅಧಿಕಾರಿಗಳಿಗೆ (Forest Officers) ದೂರಿದ್ದಾರೆ.
ಆನೆಗಳಿಂದಾಗುವ ಹಾವಳಿಯನ್ನು ತಡೆದು ಕೂಡಲೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ಇಲ್ಲಿಂದ ಬೆರಡೆಗೆ ಸ್ಥಳಾಂತರ ಮಾಡಲು ರಚನಾತ್ಮಕವಾದ ಕ್ರಮ ತೆಗೆದು ಕೊಳ್ಳಬೇಕೆಂದು ಅರಣ್ಯ ಅಧಿಕಾರಿಗಳ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಆನೆ ದಾಳಿಯಿಂದಾದ ಹಾನಿಗಳಿಗೆ ಸಂಬಂಧಪಟ್ಟ ರೈತರಿಗೆ ಅರಣ್ಯ ಇಲಾಖೆ(Forest Department) ವತಿಯಿಂದ ಪರಿಹಾರವನ್ನು ನೀಡಬೇಕೆಂದು ಸುತ್ತ ಮುತ್ತಲಿನ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರೇಂಜ್ ಫಾರೆಸ್ಟ್ ಆಫೀಸರ್ ಗಿರೀಶ್ ನಾಯ್ಕ, ಪ್ರತಿ ವರ್ಷ ಜನವರಿ ಮತ್ತು ಪೆಬ್ರುವರಿ ತಿಂಗಳದಲ್ಲಿ ಆನೆಗಳು ಬರುತ್ತಿದ್ದವು. ಆದರೆ ಈ ವರ್ಷ ನವೆಂಬರ ತಿಂಗಳಲ್ಲಿ ಬಂದಿವೆ. ಆದುದರಿಂದ ನಾವು ಕಳೆದ ಒಂದು ವಾರದಿಂದ 20 ಜನ ಅರಣ್ಯ ಸಿಬ್ಬಂದಿಗಳ ಸಹಾಯದಿಂದ ಕಾರ್ಯಾಚರಣೆಯಲ್ಲಿದ್ದೇವೆ. ದ್ರೋಣಗಳನ್ನು ಬಳಸಿ ನಾವು 5 ಆನೆಗಳ ತೆರವು ಕಾರ್ಯಾಚೆಣೆಯಲ್ಲಿ ತೊಡಗಿದ್ದೇವೆ. ಈಗ ಸದ್ಯ ಆನೆಗಳು ಶಿರಸಿ ತಾಲೂಕಿನ (Sirsi Taluku) ಕಾಗೇರಿಯ ಅರಣ್ಯ ಪ್ರದೇಶದಲ್ಲಿವೆ. ಕಾರ್ಯಚರಣೆ ಮುಂದೆವರೆಸಿದ್ದೇವೆ. ಇಲ್ಲಿಂದ ಕುಳವೆ ಮುಖಾಂತರ ಉಂಚಳ್ಳಿ ಮಾರ್ಗವಾಗಿ ಸೊರಬ ಅರಣ್ಯ (Soraba Forest) ಪ್ರದೇಶಕ್ಕೆ ಹೋಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಇದನ್ನು ಓದಿ : ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೋ ಕಾಲ್. ಮೋಸ ಹೋದ ಕಾರವಾರ ವ್ಯಕ್ತಿ
ಜಲಪಾತದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ
ಅದೃಷ್ಟದ ಕಾರು ಮಾರಲಿಲ್ಲ. ಸಮಾಧಿ ಮಾಡಿದ