ಭಟ್ಕಳ(Bhatkal) : ಸೋಮವಾರ ಬೆಳಿಗ್ಗೆ ಶಾಲೆಗೆ ತೆರಳಿ ಕಣ್ಮರೆಯಾಗಿದ್ದ ವಿದ್ಯಾರ್ಥಿ ಹೊನ್ನಾವರ ತಾಲೂಕಿನ ಗೇರುಸೊಪ್ಪ (Gerusoppa) ಬಳಿ ಇಂದು ಪತ್ತೆಯಾಗಿದ್ದಾನೆ.

ಭಟ್ಕಳ ತಾಲೂಕಿನ ಕಡವಿನಕಟ್ಟೆಯ (Kadavinakatte)ಅಮೋಘ ಈಶ್ವರ ನಾಯ್ಕ ಪತ್ತೆಯಾದ ವಿದ್ಯಾರ್ಥಿ. ಈತ ಗೇರುಸೊಪ್ಪ ಬಳಿ ಇದ್ದಾಗ ಮುಸ್ಲಿಂ ಮಹಿಳೆಯೋರ್ವಳ ಕಣ್ಣಿಗೆ ಬಿದ್ದಿದ್ದಾನೆ. ವಿಚಾರಿಸಿದಾಗ ಆರಂಭದಲ್ಲಿ ವಿಳಾಸ ಹೇಳಿರಲಿಲ್ಲ. ಬಳಿಕ ಮಹಿಳೆ ತಮ್ಮ ಪತಿಗೆ ವಿಷಯ ತಿಳಿಸಿದಾಗ ಇ ಸಮಾಚಾರದ (esamachara) ಸುದ್ದಿ ಗಮನಿಸಿ ಬಾಲಕನನ್ನ ಪರಿಚಯಿಸಿದ್ದಾರೆ.

ತಕ್ಷಣ ಬಾಲಕನ ಸಂಬಂಧಿಕರಿಗೆ ಕಾಲ್ ಮಾಡಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಮಹಿಳೆಯು ತಮ್ಮ ಸಂಬಂಧಿಯೊಬ್ಬರನ್ನ ಬಾಲಕನ ಜೊತೆಗೆ ಹೊನ್ನಾವರಕ್ಕೆ ಕಳಿಸಿ ಮನೆಯವರಿಗೆ ತಲುಪಿಸಿದ್ದಾರೆ. ಬಾಲಕನ ಪತ್ತೆ ಮಾಡಿಕೊಟ್ಟ ಮಹಿಳೆ ಕುಟುಂಬಕ್ಕೆ ಅಮೋಘ ತಂದೆ-ತಾಯಿ ಮತ್ತು ಸಂಬಂಧಿಕರು ಅಭಿನಂದನೆ ಸಲ್ಲಿಸಿದ್ದಾರೆ. ದುಗುಡಕ್ಕೊಳಗಾದ ಬಡ ಕುಟುಂಬ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನು ಓದಿ : ಶಿರಸಿಯಲ್ಲಿ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ

ಮತ್ತೋರ್ವ ಸರ್ಕಾರಿ ನೌಕರನ ಆತ್ಮಹ*

ಮೂರು ದಿನವಾದರೂ ಕದಲದ ಕೋಳಿ ಅಚ್ಚರಿ