ಕಾರವಾರ : ಪೊಲೀಸಪ್ಪನ  ಅಕ್ರಮ ವ್ಯವಹಾರವನ್ನ ಪೊಲೀಸರೆ ಬಟಾಬಯಲು ಮಾಡಿದ ಘಟನೆ ಗೋಕರ್ಣದಲ್ಲಿ ನಡೆದಿದೆ.

ಗೋವಾ ಮದ್ಯ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಗೋಕರ್ಣ ಪೊಲೀಸರು  ಪೊಲೀಸ್ ಕಾನ್ಸಟೇಬಲ್ ಮತ್ತು  ಮತ್ತೋರ್ವನನ್ನ ಬಂಧಿಸಿದ್ದಾರೆ. ಕಾರವಾರ ತಾಲೂಕಿನ ಕದ್ರಾ ಪೊಲೀಸ್ ಠಾಣೆಯ ಕಾನ್ಸಟೇಬಲ್ ಸಂತೋಷ್ ಲಮಾಣಿ ಮತ್ತು ಕಾರವಾರ ನಂದನಾಗದ್ದದ ನಿಜಮುದ್ದಿನ್ ಬಂಧಿತರು.

ಗೋವಾದಿಂದ ಅಕ್ರಮವಾಗಿ ಕಾರಿನಲ್ಲಿ ಮದ್ಯವನ್ನ ಗೋಕರ್ಣ ಕಡೆಗೆ ಒಯುತ್ತಿದ್ದರು. ಓಂ ಬೀಚ್ ರಸ್ತೆಯಲ್ಲಿ ಗೋಕರ್ಣ ಇನ್ಸ್ಪೆಕ್ಟರ್ ಯೋಗೇಶ್ ಕೆ ಎಂ ದಾಳಿ ನಡೆಸಿ ಬಂಧಿಸಿದ್ದಾರೆ.  ಈ ವೇಳೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಗೋವಾ ಮದ್ಯ ಹಾಗೂ ಕಾರು ವಶಕ್ಕೆ ಪಡೆಯಲಾಗಿದೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.