ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕುಮಟಾ (Kumta): ಜಾನುವಾರುಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ ಘಟನೆ ತಾಲೂಕಿನ ಹೊಳೆಗದ್ದೆ ಟೋಲ್ ನಾಕಾ(Holegadde Toll Naka) ಬಳಿ ದಾಳಿ ನಡೆದಿದೆ.
ಕರ್ತವ್ಯದಲ್ಲಿದ್ದ ಕುಮಟಾ ಪೊಲೀಸರಿಂದ(Kumta Police) ಗೋಮಾತೆಯನ್ನ ರಕ್ಷಿಸಿದ್ದಾರೆ. ಸಾಗಾಟದ ವೇಳೆ ಆರು ಗೋವುಗಳ ಸಾವನ್ನಪ್ಪಿದ್ದು ಬದುಕುಳಿದ ಗೋವುಗಳನ್ನ ರಕ್ಷಣೆ ಮಾಡಲಾಗಿದೆ. ಪುನಾದಿಂದ ಭಟ್ಕಳ (Puna to Bhatkal) ಕಡೆ ಜಾನುವಾರುಗಳನ್ನ ಕಂಟೆನರ್ ವಾಹನದಲ್ಲಿ ಸಾಗಿಸಲಾಗುತಿತ್ತು.
ಹಾಲಿನ ವಾಹನದಲ್ಲಿ ಗೋವುಗಳನ್ನ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕುಮಟಾ ಠಾಣೆ ಪೊಲೀಸರು(Kumta Station Police) ವಾಹನ ತಪಾಸಣೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ಅನ್ಸಾರಿ ಎಂಬಾತನನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೂ ಆರು ಜನ ತಲೆ ಮರೆಸಿಕೊಂಡಿದ್ದಾರೆ.
ಕುಮಟಾ ಠಾಣೆಯಲ್ಲಿ(Kumta Station) ಪ್ರಕರಣ ದಾಖಲಾಗಿದ್ದು,ತಲೆ ಮರೆಸಿಕೊಂಡ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ರಕ್ಷಣೆ ಮಾಡಿದ ಗೋವುಗಳನ್ನು ಪಡೆಯಲು ಗೋ ಶಾಲೆಗಳು ನಿರಾಕರಿಸಿದ್ದಾಗಿ ತಿಳಿದುಬಂದಿದೆ.
ಇದನ್ನು ಓದಿ : ರಾಷ್ಟ್ರೀಯ ಮೀನುಗಾರ ಕಾರ್ಮಿಕ ವೇದಿಕೆಯಿಂದ ಲೋಕಸಭೆ ಅಧಿವೇಶನದ ವೇಳೆ ಪ್ರತಿಭಟನೆ ಎಚ್ಚರಿಕೆ.
ಆನ್ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ. ಪಾನಿಪುರಿ ಜೊತೆ ಪಾಷಾಣ ತಿಂದ.
ಸಾಯಿಮಂದಿರ ಕಳ್ಳತನ ಮಾಡಿದ್ದು ಇಬ್ಬರಲ್ಲ ನಾಲ್ವರು? ಗೋವಾದಲ್ಲಿ ಬೆಳ್ಳಿಯ ಕೊಡೆ ಪತ್ತೆ.